ADVERTISEMENT

ಕಡವೆ ಬೇಟೆ ಆರೋಪ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 11:36 IST
Last Updated 8 ಜೂನ್ 2019, 11:36 IST
ಜೊಯಿಡಾ ತಾಲ್ಲೂಕಿನ ಕಮರಗಾಂವ ಗ್ರಾಮದಲ್ಲಿ ಕಡವೆಯನ್ನು ಬೇಟೆಯಾಡಿದ ಆರೋಪದಲ್ಲಿ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು
ಜೊಯಿಡಾ ತಾಲ್ಲೂಕಿನ ಕಮರಗಾಂವ ಗ್ರಾಮದಲ್ಲಿ ಕಡವೆಯನ್ನು ಬೇಟೆಯಾಡಿದ ಆರೋಪದಲ್ಲಿ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು   

ಜೊಯಿಡಾ: ತಾಲ್ಲೂಕಿನ ಕಮರಗಾಂವ ಗ್ರಾಮದಲ್ಲಿ ಕಡವೆಯನ್ನು ಬೇಟೆಯಾಡಿದ ಆರೋಪದಲ್ಲಿ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಕಮರಗಾಂವ ಗ್ರಾಮದ ತಾಂಬಡೋ ಪೊಂಡೋ ವೆಳೀಪ (65), ಸಾಂಗತೊ ಮಧು ವೆಳೀಪ (61) ಹಾಗೂ ತುಕಾರಾಮ ಗೋವಿಂದ ವೆಳೀಪ (25) ಬಂಧಿತರು. ಅವರಿಂದ ಕಡವೆ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನುಕಾರವಾರ ನ್ಯಾಯಾಲಯಕ್ಕೆಹಾಜರು ಪಡಿಸಲಾಗಿದೆ.

ಈ ಗ್ರಾಮವು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದಬಾರಗದ್ದಾ ಸಮೀಪವಿದೆ.ಅಣಶಿ ವಲಯ ಅರಣ್ಯಾಧಿಕಾರಿ ಈರೇಶ ಕಬ್ಬಿನ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.