ADVERTISEMENT

ವಾಹನದ ಮೇಲೆ ಉರುಳಿದ ಮರ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 16:03 IST
Last Updated 18 ಜೂನ್ 2025, 16:03 IST
ಸೊರಬ ತಾಲ್ಲೂಕಿನ ಉಳವಿ ಅಮೀಪ‌‌ ಕರ್ಜಿಕೊಪ್ಪದಲ್ಲಿ ಕ್ಯಾಂಟರ್ ಮೇಲೆ ಉರುಳಿದ‌ ಬೃಹತ್‌‌‌ ಮರ
ಸೊರಬ ತಾಲ್ಲೂಕಿನ ಉಳವಿ ಅಮೀಪ‌‌ ಕರ್ಜಿಕೊಪ್ಪದಲ್ಲಿ ಕ್ಯಾಂಟರ್ ಮೇಲೆ ಉರುಳಿದ‌ ಬೃಹತ್‌‌‌ ಮರ   

ಸೊರಬ: ತಾಲ್ಲೂಕಿನ ಉಳವಿ ಸಮೀಪದ ಕರ್ಜಿಕೊಪ್ಪ ಗ್ರಾಮದ ಬಳಿ ಬೃಹತ್ ಮರವೊಂದು ಕ್ಯಾಂಟರ್ ವಾಹನದ ಮೇಲೆ ಬುಧವಾರ ಬೆಳಿಗ್ಗೆ ಉರುಳಿ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಹಿರೇಕೆರೂರು ತಾಲ್ಲೂಕಿನ ಹದ್ರಿಹಳ್ಳಿ ಗ್ರಾಮದ ಹನುಮಂತಪ್ಪ ಮತ್ತು ವೀರೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಾಗರಕ್ಕೆ ಕಳುಹಿಸಲಾಗಿದೆ.

ಹಿರೇಕೆರೂರಿನಿಂದ ಉಳವಿ ಗ್ರಾಮದಲ್ಲಿ ಗೊಬ್ಬರ ತುಂಬಲು ವಾಹನ ಹೊರಟಿದ್ದಾಗ ಅವಘಡ ಸಂಭವಿಸಿದೆ. ಘಟನೆಯಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿದ್ದು ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ADVERTISEMENT

‘ಒಣಗಿ ಬೀಳುವಂತಿರುವ ಮರಗಳನ್ನು ಕಡಿಯುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಬೇಕು’ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.