ADVERTISEMENT

ಕಾರ್ಗಲ್: ದೇವಿ ಗುಂಡಿಯಲ್ಲಿ ಈಜಲು ಹೋಗಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 14:42 IST
Last Updated 24 ಸೆಪ್ಟೆಂಬರ್ 2023, 14:42 IST
   

ಕಾರ್ಗಲ್: ಸಮೀಪದ ಜೋಗದ ಬಳಿಯ ದೇವಿಗುಂಡಿ ಬಳಿ ಈಜಲು ಹೋಗಿ ಭಾನುವಾರ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಸಾಗರದ ಕೃಷಿ ಅಧಿಕಾರಿ ಕುಮಾರ್ ಕೆ.ಟಿ. (36) ಹಾಗೂ ಐಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿ ಅರುಣ್ ಸಿ. (28) ಮೃತಪಟ್ಟವರು.

ಕುಮಾರ್ ಕೆ.ಟಿ. ಹಾಗೂ ಅರುಣ್‌ ಅವರು ಕುಟುಂಬ ಸಮೇತರಾಗಿ ಜೋಗ ಪ್ರವಾಸಕ್ಕೆ ಹೋಗಿದ್ದರು. ಜೋಗದ ಸಮೀಪದ ದೇವಿ ಗುಂಡಿಯಲ್ಲಿ ಈಜಲು ಹೋಗಿ ಬಿದ್ದು ಮೃತಪಟ್ಟಿದ್ದಾರೆ.

ADVERTISEMENT

ಕಾರ್ಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.