ADVERTISEMENT

ಶಿಕಾರಿಪುರ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಿ: ಪ್ರೇಮ್ ಕುಮಾರಗೌಡ್ರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 15:50 IST
Last Updated 24 ಆಗಸ್ಟ್ 2023, 15:50 IST
ಪ್ರೇಮ್ ಕುಮಾರ್ ಗೌಡ್ರು
ಪ್ರೇಮ್ ಕುಮಾರ್ ಗೌಡ್ರು   

ಶಿಕಾರಿಪುರ: ಶಿಕಾರಿಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂಬುದಾಗಿ ಘೋಷಣೆ ಮಾಡುವಂತೆ ಬಿಜೆಪಿ ರೈತಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ವಿಠಲನಗರ ಪ್ರೇಮ್ ಕುಮಾರ್ ಗೌಡ್ರು ಒತ್ತಾಯಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮರ್ಪಕ ಮಳೆ ಸುರಿಯದ ಕಾರಣ ಮೆಕ್ಕೆಜೋಳ ಬೆಳೆ ಒಣಗಿದೆ. ಮೆಕ್ಕೆಜೋಳ ಬೆಳೆದ ರೈತರಿಗೆ ಪ್ರತೀ ಎಕರೆಗೆ ₹20 ಸಾವಿರ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು. ರೈತರ ಪಂಪ್‌ಸೆಟ್‌ಗೆ ಮೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದಿದ್ದರೆ ಸಂಸದ ರಾಘವೇಂದ್ರ ಹಾಗೂ ಶಾಸಕ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ADVERTISEMENT

ತಾಲ್ಲೂಕಿನ ರೈತರಿಗೆ ವಿತರಿಸಲು 500 ವಿದ್ಯುತ್ ಪರಿವರ್ತಕಗಳಿಗೆ (ಟಿಸಿ) ಬೇಡಿಕೆ ಇದ್ದು, ಆದರೆ ಕೇವಲ 50 ಲಭ್ಯವಿವೆ. ಇವುಗಳನ್ನು ಯಾರಿಗೆ ವಿತರಿಸುತ್ತೀರಿ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಈಸೂರು ಜಗದೀಶ್ ಪ್ರಶ್ನಿಸಿದರು. 

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಖಜಾಂಚಿ ಗಿರೀಶ್ ಧಾರಾವಾಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.