ADVERTISEMENT

ಸೊರಬ | ಲಸಿಕೆ ಅಡ್ಡ ಪರಿಣಾಮ: ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 5:37 IST
Last Updated 19 ಏಪ್ರಿಲ್ 2022, 5:37 IST
ಕೋವಿಡ್ ಲಸಿಕೆಯಿಂದ ದೇಹದ ಸ್ವಾಧೀನ ಕಳೆದುಕೊಂಡ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದ ಶಾಂತಬಾಯಿ, ಚಂದ್ರನಾಯ್ಕ್ ಅವರ ಪುತ್ರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು
ಕೋವಿಡ್ ಲಸಿಕೆಯಿಂದ ದೇಹದ ಸ್ವಾಧೀನ ಕಳೆದುಕೊಂಡ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದ ಶಾಂತಬಾಯಿ, ಚಂದ್ರನಾಯ್ಕ್ ಅವರ ಪುತ್ರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು   

ಸೊರಬ: ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದ ಶಾಂತಾಬಾಯಿ, ಚಂದ್ರನಾಯ್ಕ್ ಅವರ ಪುತ್ರರಾದ ಮಧುಚಂದ್ರ ಹಾಗೂ ಮನುಚಂದ್ರ ಅವರಿಗೆ ಕೋವಿಡ್ ಲಸಿಕೆ ಪಡೆದ ನಂತರ ಅಂಗಾಂಗಳು ವೈಫಲ್ಯಗೊಂಡು ಹಾಸಿಗೆ ಹಿಡಿದಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಾಲ್ಲೂಕು ಬಂಜಾರ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಸಂಸ ಸೇರಿ ವಿವಿಧ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

‘4 ತಿಂಗಳ ಹಿಂದೆ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿದ ನಂತರ ದೇಹದ ಅಂಗಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದ್ದರೂ ಚೇತರಿಕೆ ಕಂಡಿಲ್ಲ. ಮಕ್ಕಳ ಆರೋಗ್ಯದ ಕಾರಣ ಪತಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಸರ್ಕಾರ ನನ್ನ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಖರ್ಚಿಗೆ ಪರಿಹಾರ ನೀಡಬೇಕು’ ಎಂದು ಶಾಂತಬಾಯಿ ಒತ್ತಾಯಿಸಿದರು.

ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ತಾಲ್ಲೂಕು ಬಂಜಾರ ಸಮಾಜದ ಅಧ್ಯಕ್ಷ ಧರ್ಮನಾಯ್ಕ್, ಡಾಕಪ್ಪನಾಯ್ಕ್, ಜನ್ಯನಾಯ್ಕ್, ವೆಂಕಟೇಶ್ ನಾಯ್ಕ್, ಸೋಮ್ಯನಾಯ್ಕ್, ದಾನಪ್ಪ, ಬಸವರಾಜಪ್ಪ, ಮಂಜಪ್ಪ, ರುದ್ರಪ್ಪ, ಭರ್ಮಪ್ಪಗೌಡ, ಸಿ.ಕೆ. ಬಲೀಂದ್ರಪ್ಪ, ಕುಮಾರನಾಯ್ಕ್, ಬಸವಣ್ಯಪ್ಪ, ದಾನಪ್ಪನಾಯಕ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.