
ಶಿರಾಳಕೊಪ್ಪ (ಶಿಕಾರಿಪುರ): ಪಟ್ಟಣದ ಕೋರಿಟೋಪಿ ವಿರಕ್ತಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ವೀರಬಸವ ದೇವರು ಹುಕ್ಕೇರಿ ಮಠ ಅವರು ನಿಯುಕ್ತಿಗೊಂಡಿದ್ದಾರೆ. ಅವರ ಪುರಪ್ರವೇಶ ಕಾರ್ಯಕ್ರಮ ನ. 21ರಂದು ನಡೆಯಲಿದೆ ಎಂದು ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
‘40 ವರ್ಷಗಳಿಂದ ಪೀಠಾಧಿಪತಿಯಾಗಿ ನಾವು ಕಾರ್ಯ ನಿರ್ವಹಿಸಿದ್ದು, ಇದೀಗ ಮಠದ ಹಿರಿಯರು, ಸಮಾಜದ ಗಣ್ಯರೊಂದಿಗೆ ಚರ್ಚಿಸಿ ನೂತನ ಶ್ರೀಗಳ ಆಯ್ಕೆ ಮಾಡಲಾಗಿದೆ. ಲಿಂ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೋತ್ಸವದಂದು ನೂತನ ಶ್ರೀಗಳನ್ನು ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಗುವುದು’ ಎಂದು ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ತರಾಧಿಕಾರಿ ನೇಮಕ ಕಾರ್ಯಕ್ರಮದ ಅಂಗವಾಗಿ ನ. 21ರಿಂದ 28ರವರೆಗೆ ಶ್ರೀಮಠದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ವೀರಶೈವ ಸಮಾಜದ ಮುಖಂಡ ಚನ್ನವೀರಶೆಟ್ಟಿ ಹೇಳಿದರು.
ನಗರ ವೀರಶೈವ ಸಮಾಜ ಅಧ್ಯಕ್ಷ ಪ್ರಭುಸ್ವಾಮಿ, ಆನೆಮಠ ಸಮಾಜದ ಮುಖಂಡರಾದ ಕುಬುಸದ ರಾಜಣ್ಣ, ಚಂದ್ರಣ್ಣ ಸೂರಣಗಿ, ಚಂದ್ರಶೇಖರ್ ಮಂಚಾಲಿ, ಎಚ್.ಎಂ.ಚಂದ್ರಶೇಖರ್, ಲೋಕಪ್ಪ ರಟ್ಟಿಹಳ್ಳಿ, ಸಂಗಮೇಶ ದುರ್ಗದ, ಉಮೇಶ್ ಇಸ್ಲೂರು, ರಂಜನ್ ಭಂಡಾರಿ, ಅಣ್ಣಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.