ಸೊರಬ: ಕನ್ನಡದ ನೆಲ-ಜಲ, ಭಾಷೆ-ಗಡಿ ವಿಚಾರ ಎದುರಾದರೆ ಕನ್ನಡಪರ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರೂ ಸಿಡಿದೇಳುವ ಸೈನಿಕರು ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೆಗಡೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಘಟಕದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ರಾಜ್ಯದ ಮಹಾನಗರಗಳಲ್ಲಿ ಕನ್ನಡ ಹೊರತುಪಡಿಸಿ ಹಲವು ಭಾಷೆಗಳು ಹಿಡಿತ ಸಾಧಿಸಿದ್ದವು. ಇದೀಗ ಪರಿಸ್ಥಿತಿ ಬದಲಾಗಿದೆ. ಕನ್ನಡಪರ ಸಂಘಟನೆಗಳ ಹೋರಾಟದಿಂದಾಗಿ ಕನ್ನಡಿಗರು ಅಸ್ತಿತ್ವ ಕಂಡುಕೊಂಡಿದ್ದಾರೆ. ಅನ್ಯ ಭಾಷಿಕರು ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಅಧಿಕಾರ ಐದು ವರ್ಷಗಳಿಗೆ ಸೀಮಿತ. ಆದರೆ ಯಾವುದೇ ಅಪೇಕ್ಷೆ ಪಡದೇ ಹೋರಾಟ ನಡೆಸುವ ಕನ್ನಡಪರ ಸಂಘಟನೆ ಎಂದಿಗೂ ಜೀವಂತ’ ಎಂದು ಅವರು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಮುರುಳೀದರ್, ತಾಲ್ಲೂಕು ಘಟಕದ ಅಧ್ಯಕ್ಷ ಬಲೀಂದ್ರಪ್ಪ ಚಿಕ್ಕಾವಲಿ, ದಂತ ವೈದ್ಯ ಜ್ಞಾನೇಶ್, ತಾ.ಪಂ ಮಾಜಿ ಸದಸ್ಯ ಗಣಪತಿ ಹುಲ್ತಿಕೊಪ್ಪ, ನಾಗರಾಜ್ ಚಿಕ್ಕಸವಿ, ವಕೀಲ ಶೇಖರಪ್ಪ, ಜಯರಾಮ್ ಸಾಗರ, ಅನಂತ ನಾಯ್ಡು ಭದ್ರಾವತಿ, ಕರವೇ ಮಾಜಿ ಅಧ್ಯಕ್ಷ ಶಿವಕುಮಾರ್, ಸುನೀಲ್ ಗೌಡ, ಪ್ರಭಾಕರ್ ಶಿಗ್ಗಾ, ಗಣಪತಿ, ರಾಘವೇಂದ್ರ, ಶಿವಕುಮಾರ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.