ADVERTISEMENT

ಸ್ವಿಗ್ಗಿಯಿಂದ ‘ಇನ್‍ಸ್ಟಾಮಾರ್ಟ್’ ಸೇವೆ

ದಿನಸಿ ಸಾಮಗ್ರಿಗಳನ್ನೂ ಮನೆಗೆ ತಲುಪಿಸಲಿದೆ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:46 IST
Last Updated 19 ಸೆಪ್ಟೆಂಬರ್ 2020, 16:46 IST

ಬೆಂಗಳೂರು: ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ತ್ವರಿತವಾಗಿ ತಲುಪಿಸಲು ಸ್ವಿಗ್ಗಿ ಸಂಸ್ಥೆ ‘ಇನ್‍ಸ್ಟಾಮಾರ್ಟ್’ ಸೇವೆಯನ್ನು ನಗರದಲ್ಲಿ ಆರಂಭಿಸಿದೆ.

ಮನೆಗೆ ಅಗತ್ಯವಿರುವ ಸರಕು, ಸಾಮಗ್ರಿಗಳ ಖರೀದಿಗೆ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯದಿಂದ ಆ್ಯಪ್ ಗಳನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಇದನ್ನು ಪರಿಹರಿಸುವ ಸಲುವಾಗಿ 30ರಿಂದ 45 ನಿಮಿಷಗಳ ಒಳಗೆ ದಿನಸಿ ಸಾಮಗ್ರಿಗಳನ್ನು ತಲುಪಿಸುವ ಇನ್‍ಸ್ಟಾಮಾರ್ಟ್ ಸೇವೆ ಆರಂಭಿಸಿದ್ದು, ಇದನ್ನು ಮನೆಮಾತಾಗಿಸಲು ‘ನಾಳೆ ಬಾ’ ಎಂಬ ಪ್ರಚಾರ ಅಭಿಯಾನವನ್ನೂ ಸಂಸ್ಥೆ ಆರಂಭಿಸಿದೆ.

ಈ ಅಭಿಯಾನದ ಉದ್ದೇಶ ಗ್ರಾಹಕರಿಗೆ ದಿನಸಿ ಸಾಮಗ್ರಿ ಮನೆಗೆ ತರಿಸಿಕೊಳ್ಳುವ ಸ್ಲಾಟ್‍ಗಾಗಿ ನಾಳೆವರೆಗೆ ಕಾಯಬೇಕಾ? ಎಂಬ ಆತಂಕಕ್ಕೆ ಪರಿಹಾರ ಹುಡುಕುವುದಾಗಿದೆ. ಈ ಅಭಿಯಾನ ಬೆಂಗಳೂರಿನಲ್ಲಿ ವಾರದಿಂದ ಚಾಲ್ತಿಯಲ್ಲಿದೆ. ಇದು, 50 ಸಾವಿರಕ್ಕೂ ಹೆಚ್ಚು ಗ್ರಾಹಕರ ಗಮನಸೆಳೆದಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲೇ 30 ಸಾವಿರ ಮಂದಿ ಇದಕ್ಕೆ ಸ್ಪಂದಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.