ತುಮಕೂರು: ನಗರದ ಅಂತರಸನಹಳ್ಳಿ ಬಡಾವಣೆಯಲ್ಲಿ ನೂತನ ಉದ್ಯಾನ ನಿರ್ಮಿಸಲಾಗುತ್ತಿದೆ. ಉದ್ಯಾನದ ಜಾಗದಲ್ಲೇ ಕೆಲವರು ರಸ್ತೆ ನಿರ್ಮಿಸಿ, ಅತಿಕ್ರಮಣಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.
ಲೇಔಟ್ ವ್ಯಾಪ್ತಿಯಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮೇಲ್ಭಾಗದ ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಕೆಲವರು ಉದ್ಯಾನದ ಒಂದು ಬದಿಯನ್ನೇ ರಸ್ತೆ ಮಾಡಿಕೊಂಡಿದ್ದಾರೆ.
ಈ ಮನೆಗಳಿಗೆ ತೆರಳಲು ಬೇರೆ ರಸ್ತೆ ಇದ್ದರೂ ಅದನ್ನು ಬಳಸದೆ ಹೊಸ ರಸ್ತೆ ಮಾಡಿಕೊಂಡಿದ್ದಾರೆ. ಈ ರಸ್ತೆ ಬಳಕೆಯಾದರೆ ಅಪಾರ ಸಂಖ್ಯೆಯ ವಾಹನಗಳು ಉದ್ಯಾನದೊಳಗೆ ಸಂಚರಿಸುತ್ತವೆ. ಇದರಿಂದ ನೈಜ ಆಶಯಕ್ಕೆ ಭಂಗ ಬರುತ್ತದೆ. ಉದ್ಯಾನ ನಿರ್ಮಾಣವಾಗದಿದ್ದರೆ ಈ ಭಾಗದ ನಾಗರಿಕರಿಗೆ ತೊಂದರೆಯಾಗಲಿದೆ.
ನಿರ್ಮಾಣದ ಹೊಣೆ ಹೊತ್ತ ಟುಡ ರಸ್ತೆ ತೆರವುಗೊಳಿಸಬೇಕು ಎಂದು ಡಿ.ಕೆ.ನಾರಾಯಣ, ಲೋಕೇಶ್, ಸ್ವಾಮಿ, ನಾಗರಾಜ್, ಶಿವಣ್ಣ, ರಂಗಪ್ಪ, ರಾಜಣ್ಣ ಒತ್ತಾಯಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.