
ಪ್ರಜಾವಾಣಿ ವಾರ್ತೆಮಧುಗಿರಿ: ದುಷ್ಕರ್ಮಿಗಳು ಕೋತಿಗಳನ್ನು ಕೊಂದು ರಸ್ತೆ ಮಧ್ಯೆ ಎಸೆದು ಹೋಗಿರುವ ಘಟನೆ ತಾಲ್ಲೂಕಿನ ಮಿಡಿಗೇಶಿ ಬಳಿಯ ಚಿನ್ನೇನಹಳ್ಳಿ ಹತ್ತಿರ ನಡೆದಿದೆ.
ಚಿನ್ನೇನಹಳ್ಳಿ ಬಳಿ ದುಷ್ಕರ್ಮಿಗಳು ಸುಮಾರು 10 ಕೋತಿಗಳನ್ನು ಕೊಂದು ಹಾಕಿ ರಸ್ತೆ ಮಧ್ಯ ಭಾಗದಲ್ಲಿಯೇ ಎಸೆದು ಹೋಗಿದ್ದಾರೆ. ಇದನ್ನು ಕಂಡ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ 10 ಕೋತಿಗಳ ಅಂತ್ಯ ಸಂಸ್ಕಾರ ನಡೆಸಿದರು ಎಂದು ತಿಳಿದು ಬಂದಿದೆ.
ಕೋತಿಗಳನ್ನು ಕೊಂದಿರುವುದಕ್ಕೆ ಕಾರಣ ತಿಳಿದ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.