ADVERTISEMENT

ಜೆಡಿಎಸ್‌ ಸದಸ್ಯರಿಂದ ಸಭೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 7:48 IST
Last Updated 14 ಡಿಸೆಂಬರ್ 2013, 7:48 IST

ತುಮಕೂರು: ಖಾಸಗಿ ಬಸ್‌ ನಿಲ್ದಾಣ ಅಂಗಡಿ ಮಳಿಗೆ ಬಾಡಿಗೆ ಪಡೆಯಲು ಮುಂಗಡ ಹಣ ನೀಡಿದವರಿಗೆ ವಾಪಸ್‌ ಹಣ ನೀಡುವ  ಚೆಕ್‌ ವಿತರಣೆ ಕಾರ್ಯ­ಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಡಾ.ಹುಲಿನಾಯ್ಕರ್‌ ಅವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್‌ನ ನಗರಸಭೆ ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಿದ ಘಟನೆ ಶುಕ್ರವಾರ ನಡೆಯಿತು.

ನಗರಸಭೆ ಸದಸ್ಯ ನಾಗರಾಜ್‌ ಮಾತನಾಡಿ, ವಿಧಾನ ಪರಿಷತ್‌ ಸದಸ್ಯರನ್ನು ಏಕೆ ಕರೆದಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ಅವರನ್ನು ಪ್ರಶ್ನಿಸಿದರು. ಉದ್ದೇಶ ಪೂರ್ವಕ ಅಗೌರವ ತೋರಲಾಗಿದೆ ಎಂದು ಆರೋಪಿಸಿದರು. ನಾಗರಾಜ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸದಸ್ಯರಾದ ಹನುಮಂತ­ರಾಯಪ್ಪ, ಪ್ರೆಸ್‌ ರಾಜಣ್ಣ ಸಭೆಯಿಂದ ಹೊರನಡೆದರು.

ಬಳಿಕ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಸಾಂಕೇತಿಕವಾಗಿ ಕೆಲವರಿಗೆ ಚೆಕ್‌ ವಿತರಿಸಲಾಯಿತು. ಶಾಸಕ ಡಾ. ರಫೀಕ್‌ ಅಹಮ್ಮದ್‌, ನಗರಸಭೆ ಅಧ್ಯಕ್ಷೆ ಗೀತಾ ಇದ್ದರು. ಶಾಸಕರು ಇದ್ದರೂ ಮಾಜಿ ಶಾಸಕ ಷಫೀ ಅಹಮ್ಮದ್‌ ಅವರಿಗೆ ಚೆಕ್‌ ವಿತರಣೆ ಅವಕಾಶ ಮಾಡಿಕೊಟ್ಟಿದ್ದು ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.