ADVERTISEMENT

`ಪೊಲೀಸ್ ಇಲಾಖೆಯಲ್ಲಿ ಜಾತೀಯತೆ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:40 IST
Last Updated 6 ಏಪ್ರಿಲ್ 2013, 9:40 IST

ತುಮಕೂರು: ಪೊಲೀಸ್ ಇಲಾಖೆಯಲ್ಲಿ ಜಾತೀಯತೆ ಹೆಚ್ಚುತ್ತಿದ್ದು, ಪ್ರಾಮಾಣಿಕ ಕೆಲಸಗಾರರಿಗೆ ಬೆಲೆ ಇಲ್ಲದಂತಾಗಿದೆ ಎಂದು ನಿವೃತ್ತ ಡಿವೈಎಸ್ಪಿ ಆರ್.ಶಿವರುದ್ರಸ್ವಾಮಿ ವಿಷಾದಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿ, ಸಿಬ್ಬಂದಿಯನ್ನು ಜಾತಿ ಹೆಸರಿನಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಅಧಿಕಾರಿ ವರ್ಗ ಜಾತೀಯತೆ ಬಿಟ್ಟು, ಉತ್ತಮ ಕೆಲಸ ಮಾಡುವರನ್ನು ಗುರುತಿಸಿ ಗೌರವಿಸಿದರೆ ಮಾತ್ರ ಇಲಾಖೆಯಲ್ಲಿ ಶಿಸ್ತು, ಮರ್ಯಾದೆ ಉಳಿಯುತ್ತದೆ ಎಂದು ಹೇಳಿದರು.

ಎಸ್ಪಿ ರಮಣ್‌ಗುಪ್ತಾ ಪೊಲೀಸ್‌ಕಲ್ಯಾಣ ನಿಧಿಯ ಮಾಹಿತಿ ನೀಡಿದರು. ನಿವೃತ್ತ ಪೊಲೀಸ್ ಸಿಬ್ಬಂದಿ ಕಾರ್ಯ ಚಟುವಟಿಕೆಗೆ ಬಾರ್‌ಲೈನ್ ವಸತಿ ಗೃಹದ ಸಮೀಪ ನಿವೇಶನ ನೀಡಿ, ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಸರ್ಕಾರದಿಂದ ರೂ. 14 ಲಕ್ಷ ನೀಡಲಾಗಿದೆ ಎಂದರು.

ಎಎಸ್ಪಿ ಹನುಮಂತರಾಯ, ಡಿವೈಎಸ್ಪಿ ಜಗದೀಶ್, ಸೌಮ್ಯಲತಾ ಇತರರು ಭಾಗವಹಿಸಿದ್ದರು. ಕಳೆದ ವರ್ಷ ನಿವೃತ್ತರಾದ ಜಿಲ್ಲೆಯ 81 ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.