ADVERTISEMENT

ಪೊಲೀಸ್ ಪ್ರಕರಣ ವಾಪಸ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:39 IST
Last Updated 13 ಜುಲೈ 2017, 10:39 IST

ತಿಪಟೂರು: ನ್ಯಾಯ ಕೇಳಿ ನಡೆಸಿದ್ದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ರೈತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣ ಕೈಬಿಡುವಂತೆ ಒತ್ತಾಯಿಸಿ ರೈತರು ನೊಣವಿನಕೆರೆ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನೊಣವಿನಕೆರೆ ಕೆರೆ ಮೇಲಿನ ಗೊಲ್ಲಮ್ಮ ದೇವಿ ಗುಡಿ ಪಕ್ಕದ ಆಂಜನೇಯ ಮೂರ್ತಿಯನ್ನು ಈಚೆಗೆ ಕಿಡಿಗೇಡಿಗಳು ವಿರೂಪಗೊಳಿಸಿದ್ದರು. ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಸುತ್ತಲಿನ ಜನ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆ ಮಾರ್ಗದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನೀರಾವರಿ ಹೋರಾಟ ಸಮಿತಿಯ  ಪದಾಧಿಕಾರಿಗಳಾದ ವೇದಾನಂದ ಮತ್ತು ವಿನಯ್ ಎಂಬುವರ ವಿರುದ್ಧ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ನೊಣವಿನಕೆರೆ ಕೆರೆ ನೀರನ್ನು ಕುಡಿಯುವ ನೀರಿಗಾಗಿ ತಿಪಟೂರಿಗೆ ಕೊಂಡೊಯ್ಯುವ ಯೋಜನೆ ವಿರುದ್ಧ ಹೋರಾಟ ಮಾಡಿದ್ದವರಲ್ಲಿ ವೇದಾನಂದ, ವಿನಯ್‌ ಸೇರಿದ್ದರಿಂದ ನೀರಾವರಿ ಹೋರಾಟ ಹತ್ತಿಕ್ಕಲು ಇವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ADVERTISEMENT

ಈಚೆಗೆ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆ ಸಿಪಿಐ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾಗ, ಪ್ರಕರಣ ಹಿಂಪಡೆಯುವ ಭರವಸೆ ನೀಡಿದ್ದರು. ಆದರೆ ಹಿಂಪಡೆಯದೆ  ಮೊಕದ್ದಮೆ ಎದುರಿಸುವಂತೆ ಮಾಡಿದ್ದಾರೆ’ ಎಂದು ಟೀಕಿಸಿದರು. ತಕ್ಷಣ ಪ್ರಕರಣ ಕೈ ಬಿಡುವಂತೆ ಒತ್ತಾಯಿಸಿದರು.

ಮಾಜಿ ಶಾಸಕ ಬಿ.ನಂಜಾಮರಿ, ಜಿ.ಪಂ ಸದಸ್ಯ ಮೈಲಾರಿ, ಮುಖಂಡರಾದ ಎನ್.ಸಿ.ರಮೇಶ್, ಎಸ್.ವಿ.ಸ್ವಾಮಿ, ವೃಷಬೇಂದ್ರ, ವೇದಾನಂದ, ಗಂಗಾಧರ್, ಬೋರೇಗೌಡ, ಧರ್ಮೇಗೌಡ, ಮಹಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.