ADVERTISEMENT

ಭಾರತೀಯ ಚಿಂತನೆ ಚೇತನ ವಿವೇಕಾನಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 9:45 IST
Last Updated 18 ಜನವರಿ 2011, 9:45 IST

ಚಿಕ್ಕನಾಯಕನಹಳ್ಳಿ: ಪರಿಶ್ರಮ, ಸ್ವಪ್ರಯತ್ನ, ಸ್ವಾವಲಂಬನೆ, ಆತ್ಮವಿಶ್ವಾಸಕ್ಕೆ ಒತ್ತುಕೊಡುವ ಚಿಂತೆನಗಳು ವಿವೇಕಾನಂದರ ವಿಚಾರಧಾರೆಯ ಹೂರಣ ಎಂದು ತುಮಕೂರು ರಾಮಕೃಷ್ಣಾಶ್ರಮದ ಅಧ್ಯಕ್ಷ ವಿರೇಶಾನಂದ ಸ್ವಾಮೀಜಿ ಸೋಮವಾರ ಇಲ್ಲಿ ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಮಲ್ಲಿಕಾರ್ಜುನಸ್ವಾಮಿ ಡಿಇಡಿ ಕಾಲೇಜು ಆಶ್ರಯದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು, ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶ್ವದ ಎಲ್ಲ ಧರ್ಮದ ಸಾರವನ್ನರಿತು ವಿಶ್ವಕ್ಕೆ ಭಾರತೀಯ ಚಿಂತನೆಗಳನ್ನು ಶುದ್ಧೀಕರಣ ಗೊಳಿಸಿ ಧರ್ಮದ ಸತ್ವವನ್ನು ಸಾರಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದ ಎಂದರು.
ನಿಜವಾದ ತಪಸ್ಸು ಸಮಾಜದ ಉದ್ದಾರದಲ್ಲಿದೆ ಎಂದು ಸಾರಿ ಸನ್ಯಾಸಿಗಳನ್ನೂ ಸಮಾಜ ಸೇವೆಯಲ್ಲಿ ತೊಡಗಿಸಿದ ಕೀರ್ತಿ ಸಲ್ಲುತ್ತದೆ. ಕುವೆಂಪು ಸಂಪೂರ್ಣ ಆಸ್ತಿಕರಾಗಿದ್ದರು. ಮೈಸೂರು ವಿವೇಕಾನಂದಾಶ್ರಮ ದಲ್ಲಿ ಮಂತ್ರದೀಕ್ಷೆ ಪಡೆದು ರಾಮಾಯಣದರ್ಶನಂ ಮಹಾಕಾವ್ಯ ರಚನೆ ಪ್ರೇರಣೆ ಪಡೆದರು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜರಾವ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಎಂ.ವಿ. ರಾಜ್‌ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎನ್.ಎಸ್. ಸುಧಾಕರ್, ಕೆ.ಜಿ.ರಾಜೀವಲೋಚನ ಮಾತನಾಡಿದರು. ಸಿ.ಗುರುಮೂರ್ತಿ ಸ್ವಾಗತಿಸಿದರು. ಲಿಂಗರಾಜು ನಿರೂಪಿಸಿ, ಸಿ.ಎಚ್.ಚಿದಾನಂದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.