ADVERTISEMENT

ಮನೆ ಮಾಲೀಕರ ಮೇಲೆ ಗೂಂಡಾ ಕಾಯ್ದೆ

ಅಕ್ರಮ ಮದ್ಯ: ಮಾಹಿತಿದಾರರಿಗೆ ರೂ.50 ಸಾವಿರ ಬಹುಮಾನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 8:46 IST
Last Updated 25 ಏಪ್ರಿಲ್ 2013, 8:46 IST

ತುಮಕೂರು: ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಸಿ, ಸಾಗಣೆ ಮಾಡುವವರು ಹಾಗೂ ಸಂಗ್ರಹಿಸುವ ಮನೆ ಮಾಲೀಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು. ಆರೋಪಿಯನ್ನು ಮಾಲು ಸಮೇತ ಹಿಡಿದುಕೊಟ್ಟವರಿಗೆ ರೂ. 50 ಸಾವಿರ ಬಹುಮಾನ ನೀಡಲಾಗುವುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. 

ವಿಧಾನಸಭಾ ಚುನಾವಣೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು 898 ಕಡೆ ದಾಳಿ ನಡೆಸಿ, 56 ಮೊಕದ್ದಮೆ ದಾಖಲಿಸಿದ್ದಾರೆ. 18 ನಿಯಮ ಉಲ್ಲಂಘನೆ ಮೊಕದ್ದಮೆ ದಾಖಲಿಸಿ, 46 ಆರೋಪಿಗಳನ್ನು ಬಂಧಿಸಿದ್ದಾರೆ. 1403 ಲೀಟರ್ ಮದ್ಯ ಮತ್ತು 26 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ. 5 ವಾಹನ ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿರಾದ ಶ್ರೀದೇವಿ ವೈನ್ಸ್‌ಗೆ ಸೇರಿದ ಮರಳಿನಲ್ಲಿ ಹೂತಿಟ್ಟ್ದ್ದಿದ 53 ರಟ್ಟಿನ ಪೆಟ್ಟಿಗೆಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದ ಪಾವಗಡ ತಾಲ್ಲೂಕಿನ ರವಿ ವೈನ್ಸ್‌ಗೆ ಸೇರಿದ 24 ಬಾಕ್ಸ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಮಾಲೀಕರ ವಿರುದ್ಧ ದೂರು ದಾಖಲಿಸಿದ್ದು, ಅಂಗಡಿಗಳ ಲೈಸನ್ಸ್ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ದೂರು ನೀಡಲು ಸಾರ್ವಜನಿಕರು ಮೊಬೈಲ್‌ಗೆ 9449597050ಗೆ ಮಾಹಿತಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.