ADVERTISEMENT

ಮಹನೀಯರ ಸಂದೇಶ ಬದುಕಿಗೆ ದಾರಿದೀಪ

​ಪ್ರಜಾವಾಣಿ ವಾರ್ತೆ
Published 5 ಮೇ 2018, 14:01 IST
Last Updated 5 ಮೇ 2018, 14:01 IST

ಕೊಡಿಗೇನಹಳ್ಳಿ: ಮನುಷ್ಯ ಸಂಸ್ಕಾರ ವಂತನಾಗಬೇಕಾದರೆ ತಮ್ಮಲ್ಲಿನ ಅಹಂಕಾರ ಬಿಟ್ಟು ಮಹಾನ್ ವ್ಯಕ್ತಿಗಳ ಸಂದೇಶ, ತಪೋಗುಣಗಳನ್ನು ರೂಢಿಸಿಕೊಳ್ಳಬೇಕು. ಅವು ಬದುಕಿಗೆ ದಾದಿದೀಪವಾಗಲಿವೆ ಎಂದು ರಾಮಕೃಷ್ಣ ಆಶ್ರಮದ ತಗ್ಗಿಹಳ್ಳಿ ರಮಾನಂದಸ್ವಾಮಿ ತಿಳಿಸಿದರು.

ಹೋಬಳಿಯ ಮೈದನಹಳ್ಳಿ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಂಕರ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಹ್ಮತತ್ವ, ಶಂಕರ ತತ್ವ ಮತ್ತು ಇತರ ಮಹನಿಯರ ತತ್ವಗಳನ್ನು ತಮ್ಮ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಸ್ವಾಸ್ಥತೆ ಹಾಗೂ ಸಾಮರಸ್ಯದಿಂದ ಜೀವಿಸಬಹುದು. ಬ್ರಾಹ್ಮಣ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದಾಗ ಮಾತ್ರ ಅವರು ಮುಂದಿನ ಸವಾಲುಗಳನ್ನು ಮೆಟ್ಟಿ ನಿಲ್ಲಲೂ ಸಾಧ್ಯ ಎಂದರು.

ADVERTISEMENT

ಶಾಸಕ ಕೆ.ಎನ್. ರಾಜಣ್ಣ ಮಾತನಾಡಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಂಗಳೂರು, ಕಾರ್ಯದರ್ಶಿ ಮುರಳಿಧರ್, ತಾಡಿ ಶಿವರಾಂ, ಪ್ರಕಾಶ್ ರಾವ್, ಗೋಪಿನಾಥ್, ಶ್ರೀನಿವಾಸಮೂರ್ತಿ, ಎಂ.ಕೆ.ರಮೇಶ್, ಎಂ.ಕೆ.ಭಾಸ್ಕರ್, ಎಂ.ಕೆ.ಶ್ರೀನಿವಾಸ್ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಸತ್ಯನಾರಾಯಣ, ಲಕ್ಷ್ಮೀಕಾಂತ್, ಸಿಂಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ. ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.