ADVERTISEMENT

ಮೇವಿನ ಸ್ವಾವಲಂಬನೆ ಕಂಡುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 10:25 IST
Last Updated 4 ಅಕ್ಟೋಬರ್ 2011, 10:25 IST

ಚಿಕ್ಕನಾಯಕನಹಳ್ಳಿ: ಕ್ಷೀರಕ್ರಾಂತಿಗೂ ಮುನ್ನ ಮೇವಿನ ಸ್ವಾವಲಂಬನೆ ಆಂದೋಲನದ ಅವಶ್ಯಕತೆಯಿದೆ ಎಂದು ಕೇಂದ್ರೀಯ ಮೇವಿನ ಬೀಜ ಉತ್ಪಾದನಾ ಕೇಂದ್ರದ ಮುಖ್ಯಸ್ಥ ಬಾಲಸುಬ್ರಹ್ಮಣ್ಯಂ ತಿಳಿಸಿದರು.

ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಹೆಸರುಘಟ್ಟದ ಬೀಜ ಉತ್ಪಾದನಾ ಕೇಂದ್ರದ ಆಶ್ರಯದಲ್ಲಿ ಈಚೆಗೆ ನಡೆದ ಬಹುವಾರ್ಷಿಕ ಮೇವಿನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಹಳ್ಳಿಗಳಲ್ಲಿ ಹಾಲಿನ ಧಾರೆ ಹೊಳೆಯಾಗಿ ಹರಿದಿದ್ದರೂ; ಮೇವಿನ ಸಮಸ್ಯೆ ಜಟಿಲಗೊಳ್ಳುತ್ತಿದೆ ಎಂದರು.

ಶೆಟ್ಟಿಕೆರೆ ಪಶುವೈದ್ಯಾಧಿಕಾರಿ ಡಾ.ರಘುಪತಿ ಮಾತನಾಡಿದರು. ನಾಲ್ಕು ದಿನ ರೈತರ ಜಮೀನಿನಲ್ಲಿ ನಡೆದ ಮೇವಿನ ಬೆಳೆ ಪ್ರಾತಕ್ಷಿಕೆಯಲ್ಲಿ ಗ್ರಾಮದ ಕೆಂಡ ಸಂಪಿಗೆ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರಾದ ವಾಣಿ, ಗವಿಯಮ್ಮ, ದ್ರಾಕ್ಷಾಯಿಣಿ, ಶಿವಮ್ಮ, ಶಿವರತ್ನ, ಭಾಗ್ಯಮ್ಮ ಇತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.