
ಪ್ರಜಾವಾಣಿ ವಾರ್ತೆಪಾವಗಡ: ಕ್ಷುಲ್ಲಕ ಕಾರಣಕ್ಕೆ ವಿದ್ಯುತ್ ಕಂಬವೇರಿದ ವ್ಯಕ್ತಿಯೊಬ್ಬನನ್ನು ಕೆಳಗಿಳಿಸಲು ಗ್ರಾಮಸ್ಥರು ಪರದಾಡಿದ ಘಟನೆ ತಾಲ್ಲೂಕಿನ ಮಂಗಳವಾಡ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಲಿಂಗರಾಜು (22) ಎಂಬಾತ ತನ್ನನ್ನು ಅಜ್ಜಿ ಬೈದಳೆಂಬ ಕಾರಣಕ್ಕೆ ಬೆಳಿಗ್ಗೆ 9 ಗಂಟೆಗೆ ವಿದ್ಯುತ್ ಕಂಬ ಏರಿದ. ಗ್ರಾಮಸ್ಥರು ಕೂಡಲೇ ಬೆಸ್ಕಾಂ ಕಚೇರಿಗೆ ಫೋನ್ ಮಾಡಿ ವಿದ್ಯುತ್ ಸಂಪರ್ಕ ತೆಗೆಯಲು ಮನವಿ ಮಾಡಿ ಅನಾಹುತ ತಪ್ಪಿಸಿದರು.
ಏಣಿ ಹಾಕಿ ಕಂಬದಿಂದ ಇಳಿಯುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಯಾರಾದರೂ ತನ್ನ ಹತ್ತಿರ ಬಂದರೆ ಮೇಲಿಂದ ಧುಮುಕುವುದಾಗಿ ಬೆದರಿಸಿದ. ಸ್ಥಳಕ್ಕೆ ಬಂಧ ಅರಸೀಕೆರೆ ಪೊಲೀಸರು ಲಿಂಗರಾಜುವಿನ ಮನವೊಲಿಸಿ ಕಂಬದಿಂದ ಕೆಳಗಿಳಿಸಿದರು.
ನಂತರ ಮದ್ಯ ಸೇವಿಸಿದ್ದ ಅವನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ವಶಕ್ಕೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.