ಶಿರಾ: ನಗರದ ತಾಲ್ಲೂಕು ಕಚೇರಿ ಬಳಿ ಶನಿವಾರ ಕಾರಿನ ಗಾಜು ಒಡೆದು ಕಾರಿನೊಳಗೆ ಇದ್ದ ₹1 ಲಕ್ಷ ಕಳ್ಳತನ ಮಾಡಲಾಗಿದೆ.
ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಲಕ್ಕೇನಹಳ್ಳಿ ಗ್ರಾಮದ ರಘುವೀರ್ ಅವರು ಜಮೀನು ವಿವಾದ ಬಗೆ ಹರಿಸಿಕೊಂಡಿದ್ದು, ಅದರ ಬಾಬ್ತು ₹6 ಲಕ್ಷ ಕೊಡಬೇಕಿತ್ತು. ಅದರಲ್ಲಿ ₹5 ಲಕ್ಷ ನೀಡಿ ಪತ್ರವಾದ ನಂತರ ಉಳಿದ ₹1 ಲಕ್ಷ ನೀಡಲು ಶನಿವಾರ ತಾಲ್ಲೂಕು ಕಚೇರಿ ಬಳಿ ಕಾರು ನಿಲ್ಲಿಸಿ ಪತ್ರಬರಹಗಾರ ಬಳಿ ಪತ್ರ ಮಾಡಿಸುತ್ತಿದ್ದಾಗ ಕಳ್ಳತನ ನಡೆದಿದೆ.
ಪತ್ರ ಸಿದ್ಧವಾಗುತ್ತಿದ್ದ ಸಮಯದಲ್ಲಿ ಹಣ ತರಲು ಕಾರಿನ ಬಳಿ ಬಂದಾಗ ಕಾರಿನ ಗಾಜು ಪುಡಿಯಾಗಿರುವುದು ಕಂಡು ಅನುಮಾನದಿಂದ ನೋಡಿದಾಗ ಕಳ್ಳತನವಾಗಿರುವುದು ದೃಢವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.