ತುಮಕೂರು: ಶಾಂತಿಯುತವಾಗಿ ಲೋಕಸಭಾ ಚುನಾವಣೆ ನಡೆಸುವ ಉದ್ದೇಶದಿಂದ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಕಾನೂನು ಸುವ್ಯವಸ್ಥೆ ಹಾಳು ಮಾಡುವಂತಹ ಹಿನ್ನೆಳೆಯುಳ್ಳ ಜಿಲ್ಲೆಯ 16 ಜನರನ್ನು ಗಡಿಪಾರು ಮಾಡಲಾಗಿದೆ.
ನಗರದ ಭಾರತಿ ನಗರದ ರವಿಕುಮಾರ ಅಲಿಯಾಸ್ ರೇಪ್ ರವಿ (29), ನಜರಾಬಾದ್‌ನ ಅಲಿ ಹುಸೇನ್ ಅಲಿಯಾಸ್ ಗ್ಯಾಸ್ ಅಲಿ, ಶಾಂತಿನಗರದ ಸಂಪತ್ ಕುಮಾರ್ ಅಲಿಯಾಸ್ ಸಂಪಿ (34), ತಿಪಟೂರಿನ ವಿನಾಯಕ ನಗರದ ಸಲ್ಮಾನ್‌ಖಾನ್, ಗಾಂಧಿನಗರದ ಬಿ.ಆರ್.ಚೇತನ (29), ತಾಲ್ಲೂಕಿನ ಚಿಕ್ಕರಂಗಾಪುರದ ಶಶಿಧರ (33), ತುರುವೇಕೆರೆ ತಾಲ್ಲೂಕಿನ ತಂಡಗ ಮಜರೆ ಕರೆಕಲ್ಲು ಗ್ರಾಮದ ಟಿ.ಎಸ್.ನಾಗರಾಜು ಅಲಿಯಾಸ್ ರಾಕಿ, ಕೊಡಗೀಹಳ್ಳಿಯ ಕೆ.ಎಂ.ಮಂಜುನಾಥ ಅಲಿಯಾಸ್ ಲಾಳಿ ಮಂಜ, ಚಿಕ್ಕಶೆಟ್ಟಿಕೆರೆಯ ಸಿ.ಕಿರಣ್ (30), ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ವಿಜಯನಗರ ಬಡಾವಣೆಯ ಹರೀಶ ಅಲಿಯಾಸ್ ಖಡಕ್ ಹರೀಶ್ (29), ಕೆಂಕೆರೆಯ ಬಿ.ಎ.ಬಸವರಾಜು.
ಕುಣಿಗಲ್ ಪಟ್ಟಣದ ಜನತಾ ಕಾಲೋನಿಯ ಶ್ರೀನಿವಾಸ (21), ತಾಲ್ಲೂಕಿನ ಕೂತಾರಹಳ್ಳಿ ಕೆ.ಡಿ.ಆಕಾಶ್ (21), ಗುಬ್ಬಿ ಪಟ್ಟಣದ ಮಾರನಕಟ್ಟೆಯ ಫರ್ಮಾನ್ ಖಾನ್ (31), ತಾಲ್ಲೂಕಿನ ಸಿ.ಎಸ್.ಪುರದ ಯಧುನಂದನ, ಪಾವಗಡ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ವಿರೇಶ ಎಂಬುವರನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.