ADVERTISEMENT

ಹುಳಿಯಾರು: ಸಿಡಿಲು ಬಡಿದು 20 ಕುರಿಗಳು ಸಾವು

​ಪ್ರಜಾವಾಣಿ ವಾರ್ತೆ
Published 15 ಮೇ 2024, 4:24 IST
Last Updated 15 ಮೇ 2024, 4:24 IST
ಹುಳಿಯಾರು ಸಮೀಪದ ಹನುಮಂತನಹಳ್ಳಿ ಗ್ರಾಮದ ಬಳಿ ಭಾನುವಾರ ಸಿಡಿಲು ಬಡಿದು 20 ಕುರಿಗಳು ಮೃತಪಟ್ಟಿವೆ
ಹುಳಿಯಾರು ಸಮೀಪದ ಹನುಮಂತನಹಳ್ಳಿ ಗ್ರಾಮದ ಬಳಿ ಭಾನುವಾರ ಸಿಡಿಲು ಬಡಿದು 20 ಕುರಿಗಳು ಮೃತಪಟ್ಟಿವೆ   

ಹುಳಿಯಾರು: ತಿಮ್ಮನಹಳ್ಳಿ ಬಳಿಯ ಹನಮಂತನಹಳ್ಳಿಯಲ್ಲಿ ಬಾನುವಾರ ಸಿಡಿಲು ಬಡಿದು 20 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.

ಹನುಮಂತನಹಳ್ಳಿ ಗ್ರಾಮದ ಜಯಣ್ಣ ಅವರಿಗೆ ಸೇರಿದ ಕುರಿಗಳಾಗಿದ್ದು ಎಂದಿನಂತೆ ಕುರಿಗಳನ್ನು ಮೇಯಿಸಲು ಗ್ರಾಮದ ಹೊರವಲಯದ ಜಮೀನಿಗೆ ತೆರಳಿದ್ದರು. ಸಣ್ಣದಾಗಿ ಮಳೆ ಆರಂಭವಾದ ತಕ್ಷಣ ಕುರಿಗಳು ಜಮೀನಿನ ಹುಣಸೆ ಮರದ ಕೆಳಗೆ ಹೋದಾಗ ಸಿಡಿಲು ಬಡಿದಿದೆ. ಮಂದೆಯಲ್ಲಿದ್ದ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಜಯಣ್ಣ ಛತ್ರಿ ಹಿಡಿದು ಬೇರೊಂದು ಹುಣಿಸೆಮರದ ಕೆಳಗೆ ಆಶ್ರಯ ಪಡೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ತಿಮ್ಮನಹಳ್ಳಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ಎಂ.ಶಾಂತೇಶ್‌ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.