ADVERTISEMENT

ಶಿರಾ ತಾಲ್ಲೂಕಿಗೆ ₹ 2,500 ಕೋಟಿ ಅನುದಾನ: ಟಿ.ಬಿ. ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 9:01 IST
Last Updated 1 ಅಕ್ಟೋಬರ್ 2020, 9:01 IST
ಪಟ್ಟನಾಯಕನಹಳ್ಳಿಯಲ್ಲಿ ನಡದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಟಿ.ಬಿ.ಜಯಚಂದ್ರ ಮಾತನಾಡಿದರು
ಪಟ್ಟನಾಯಕನಹಳ್ಳಿಯಲ್ಲಿ ನಡದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಟಿ.ಬಿ.ಜಯಚಂದ್ರ ಮಾತನಾಡಿದರು   

ಪಟ್ಟನಾಯಕನಹಳ್ಳಿ: ‘ನಾನು ಮಾತುಗಾರನಲ್ಲ, ಕೆಲಸಗಾರ. ಸರ್ಕಾರದಿಂದ ₹ 2,500 ಕೋಟಿ ಅನುದಾನ ತಂದು ಶಿರಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ಹೇಳಿದರು.

ಹೆಂದೊರೆ, ನಾದೂರು ಹಾಗೂ ಹಂದಿಕುಂಟೆ ಪಂಚಾಯಿತಿಯಲ್ಲಿ ನೆಡದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂಬ ಮಾತು ಚಾಲ್ತಿಯಲ್ಲಿದ್ದ ಸಮಯದಲ್ಲಿ ಕೇಂದ್ರ ಸರ್ಕಾರದ ಅನುದಾನ ತಂದು ಅದನ್ನು ಸಾಧ್ಯವಾಗಿಸಿದ್ದೆ. ಮೂರು ವರ್ಷಗಳಲ್ಲಿ ಹೇಮಾವತಿ ಅಣೆಕಟ್ಟು ತುಂಬಿದರೂ, ತಾಲ್ಲೂಕಿಗೆ ನೀರು ಹರಿಸಿಲ್ಲ. ನನಗೆ ಮತ್ತೆ ಅಧಿಕಾರ ನೀಡಿದರೆ ತಾಲ್ಲೂಕಿನ ಸಮಸ್ಯೆಗೆ ದನಿಯಾಗುತ್ತೇನೆ’ ಎಂದರು.

ADVERTISEMENT

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಅರ್.ಮಂಜುನಾಥ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮುಖಂಡರಾದ ಎನ್.ಸಿ.ದೊಡ್ಡಯ್ಯ, ಬಿ.ಪಿ. ಪಾಂಡುರಂಗಯ್ಯ ಮಾತನಾಡಿದರು.

ಮುಖಂಡರಾದ ಸಿದ್ದೇಶ್ವರಪ್ಪ, ಅರೇಹಳ್ಳಿ ರಮೇಶ್, ಲೋಕೇಶ್, ಕೆ.ಎಂ.ಶ್ರೀನಿವಾಸ್, ಕೆ.ಎನ್.ಮಂಜುನಾಥ್, ಲಿಂಗಭೂಷಣ್, ಬಾಬಾಜಾನ್, ಪದ್ಮರಾಜ್, ರಾಘವೇಂದ್ರ, ರಾಜಣ್ಣ,ಶಿವಣ್ಣ, ಪಿ.ಬಿ.ನಾಗರಾಜ್, ತಿಮ್ಮಣ್ಣ, ಮಹದೇವಿ, ಈರಣ್ಣ, ಗೋವಿಂದಪ್ಪ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.