ADVERTISEMENT

ಬಿಜೆಪಿಯ 30 ಶಾಸಕರು ಕಾಂಗ್ರೆಸ್‌ಗೆ: ಹರಿಪ್ರಸಾದ್

ಸವದಿ ಹೇಳಿಕೆಗೆ ಬಿ.ಕೆ‌.ಹರಿಪ್ರಸಾದ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:16 IST
Last Updated 25 ಅಕ್ಟೋಬರ್ 2020, 8:16 IST

ಶಿರಾ(ತುಮಕೂರು): ಬಿಜೆಪಿಯ 30 ಶಾಸಕರು ಕಾಂಗ್ರೆಸ್‌ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ‌.ಹರಿಪ್ರಸಾದ್ ಹೇಳಿದ್ದಾರೆ.‌

ಕಾಂಗ್ರೆಸ್‌ನ ಐವರು ಶಾಸಕರು ಬಿಜೆಪಿ ಸೇರುವುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿರುವುದರಲ್ಲಿ ಹೊಸದೇನೂ ಇಲ್ಲಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್‌ನ 15 ಶಾಸಕರನ್ನು ಅನೈತಿಕವಾಗಿ ಆಪರೇಷನ್ ಕಮಲದ ಮೂಲಕ ಖರೀದಿಸಿದ್ದಾರೆ. ಭ್ರಷ್ಟಾಚಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.