ADVERTISEMENT

ತುಮಕೂರು: ಒಂದೇ ದಿನ 443 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 17:09 IST
Last Updated 29 ಸೆಪ್ಟೆಂಬರ್ 2020, 17:09 IST

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, 443 ಮಂದಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರ ನಾಲ್ವರು ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿನಿಂದ ಒಬ್ಬರು ಹಾಗೂ ಕೊರೊನಾ ಸೋಂಕಿನ ಜತೆಗೆ ಅನ್ಯಕಾರಣದಿಂದ ಮೂವರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 295 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 13,013 ಮಂದಿಗೆ ಸೋಂಕು ತಗುಲಿದ್ದು, ಇನ್ನೂ 2,248 ಸಕ್ರಿಯ ಪ್ರಕರಣಗಳು ಇವೆ.

ತುಮಕೂರು ತಾಲ್ಲೂಕಿನ 170, ಚಿಕ್ಕನಾಯಕನಹಳ್ಳಿ 28, ಗುಬ್ಬಿ 39, ಕೊರಟಗೆರೆ 22, ಕುಣಿಗಲ್ 34, ಮಧುಗಿರಿ 41, ಪಾವಗಡ 29, ಶಿರಾ 28, ತಿಪಟೂರು 28, ತುರುವೇಕೆರೆ ತಾಲ್ಲೂಕಿನ 24 ಮಂದಿಗೆ ಸೋಂಕು ದೃಢವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.