
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ಕುಣಿಗಲ್: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಾಕೇನಹಳ್ಳಿ ಬಳಿ ನಡೆದ ಬೈಕ್‌ಗಳ ನಡುವಿನ ಡಿಕ್ಕಿಯಲ್ಲಿ ಬ್ಯಾಲದಕೆರೆ ಮೂಲದ ಬೆಂಗಳೂರು ನಿವಾಸಿ ಹನುಮೇಶ್ (50) ಮೃತಪಟ್ಟಿದ್ದಾರೆ.
ಗವಿಮಠದ ಬಳಿ ಬೈಕ್‌ಗಳ ಡಿಕ್ಕಿಯಿಂದಾಗಿ ದೊಡ್ಡಯ್ಯನ ಪಾಳ್ಯದ ಚನ್ನಕೇಶವ (28) ಮೃತಪಟ್ಟಿದ್ದಾರೆ.
ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.