ADVERTISEMENT

ತಿಪಟೂರು | ಸಕಾಲಕ್ಕೆ ಬಾರದ ಆಂಬುಲೆನ್ಸ್‌: ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 10:25 IST
Last Updated 22 ಸೆಪ್ಟೆಂಬರ್ 2025, 10:25 IST
   

ತಿಪಟೂರು: ಸಕಾಲಕ್ಕೆ ಆಂಬುಲೆನ್ಸ್‌ ವಾಹನ ಸಿಗದೆ ತಾಲ್ಲೂಕಿನ ಕರೀಕೆರೆ ಗ್ರಾಮದಲ್ಲಿ ಸೋಮವಾರ ಚನ್ನಬಸವಯ್ಯ (80) ಎಂಬುವರು ಮೃತಪಟ್ಟಿದ್ದಾರೆ.

ಚನ್ನಬಸವಯ್ಯ ಅಸ್ತಮಾ ರೋಗದಿಂದ ಬಳಲುತ್ತಿದ್ದರು. ಸೋಮವಾರ ಅವರ ಕುಟುಂಬಸ್ಥರು ಅಂಬುಲೆನ್ಸ್‌ಗೆ ಕರೆ ಮಾಡಿದರೂ, ಗಂಟೆಗಳ ಕಾಲ ಕಾದರೂ ವಾಹನ ಬಂದಿಲ್ಲ. ಮಧ್ಯಾಹ್ನದ 12ರ ಸಮಯದಲ್ಲಿ ಕರೆ ಮಾಡಿದಾಗ 'ತಿಪಟೂರು ಉಪವಿಭಾಗದ ಯಾವುದೇ ಆಸ್ಪತ್ರೆಯಿಂದ 108 ಅಂಬುಲೆನ್ಸ್‌ ಸೇವೆ ಲಭ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಮತ್ತೊಮ್ಮೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಚನ್ನಬಸವಯ್ಯ ಗ್ರಾಮದಲ್ಲಿಯೇ ಮರಣ ಹೊಂದಿದ್ದಾರೆ. ‘ಕರೆ ಮಾಡಿದ ತಕ್ಷಣಕ್ಕೆ ಸ್ಪಂದಿಸಿದ್ದರೆ ಪ್ರಾಣ ಉಳಿಸಬಹುದಾಗಿತ್ತು. ಆಂಬುಲೆನ್ಸ್‌ ಸೇವೆ ಸಿಗದೆ ಹೀಗಾಯಿತು’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.