ADVERTISEMENT

ಹಣ, ಆಭರಣ ದೋಚಿದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:19 IST
Last Updated 27 ಸೆಪ್ಟೆಂಬರ್ 2020, 3:19 IST
ಹೊತ್ತಿ ಉರಿದ ವಾಹನ
ಹೊತ್ತಿ ಉರಿದ ವಾಹನ   

ಕುಣಿಗಲ್: ತಾಲ್ಲೂಕಿನ ಕೊಪ್ಪವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರಮ್ಯಾ ಅವರಿಂದ ಮಾರ್ಚ್‌ನಲ್ಲಿ ಸರ ಹಾಗೂ ನಗದು ದೋಚಿದ ಆರೋಪದ ಮೇಲೆ ಬೆಂಗಳೂರಿನ ರೇವಂತ್ ರಾವ್, ನೆಲಮಂಗಲ ತಾಲ್ಲೂಕು ಸೀಗೆಪಾಳ್ಯ ಗೊಲ್ಲರಹಟ್ಟಿಯ ಮುರುಳೀಕೃಷ್ಣ ಮತ್ತು ಗುಬ್ಬಿ ತಾಲ್ಲೂಕು ಪೆಂಡಾರನಹಳ್ಳಿಯ ಹೇಮಂತ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್‌ನಲ್ಲಿ ರಮ್ಯಾ ಕುಣಿಗಲ್‌ನಿಂದ ಎಡೆಯೂರು ಕಡೆಗೆ ದ್ವಿಚಕ್ರವಾಹನದಲ್ಲಿ ತೆರಳುವಾಗ ಆರೋಪಿಗಳು ಅವರನ್ನು ಅಡ್ಡಗಟ್ಟಿ ₹ 50 ಸಾವಿರ ನಗದು, ಒಂದು ಮೊಬೈಲ್, ಟ್ಯಾಪ್ ಹಾಗೂ ಸರ ದೋಚಿದ್ದರು. ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಪಿಐ ನಿರಂಜನ್ ಕುಮಾರ್, ಪಿಎಸ್‌ಐ ಬಿ.ಪಿ.ಮಂಜು, ಸಿಬ್ಬಂದಿ ನವೀನ್ ಕುಮಾರ್, ನಟರಾಜು, ಪ್ರಶಾಂತ್, ನರಸಿಂಹಮೂರ್ತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಹೆದ್ದಾರಿಯಲ್ಲಿ ಸುಲಿಗೆ: ಮೂವರ ಯುವಕರ ಸೆರೆ

ಮಧುಗಿರಿ: ರಾಜ್ಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ₹ 10,000 ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ರಸ್ತೆಯ ನಿವಾಸಿ ರಾಕೇಶ್ (26), ಜಿಬಿಎನ್ ರಸ್ತೆಯ ಬಾಲಾಜಿ ಮಿಲ್ ಹಿಂಭಾಗದ ನಿವಾಸಿ ಉಪೇಂದ್ರ (22) ಹಾಗೂ ಕರಡಿಪುರ ನಿವಾಸಿ ಭರತ್ (22) ಬಂಧಿತರು.

ಸೆಪ್ಟೆಂಬರ್‌ 24ರಂದು ಪಾವಗಡ ತಾಲ್ಲೂಕು ಕಡಮಲಕುಂಟೆ ಗ್ರಾಮದ ನಿವಾಸಿಗಳಾದ ಅಮರನಾಯಕ ಹಾಗೂ ಅಮರನಾಥ್ ಮಹೇಂದ್ರ ಬೊಲೆರೊ ಪಿಕಪ್ ವಾಹನದಲ್ಲಿ ಪಟ್ಟಣದ ಅವಲಕ್ಕಿ ಮಿಲ್ ಸಮೀಪ ಬಂದಾಗ ಮೂವರು ಆರೋಪಿಗಳು ವಾಹನ ಅಡ್ಡಗಟ್ಟಿ ಇಬ್ಬರಿಗೂ ಥಳಿಸಿ, ₹ 10,000 ಹಾಗೂ ಮೊಬೈಲ್ ಕಿತ್ತು ಪರಾರಿಯಾಗಿದ್ದರು.‌

ಸಿಪಿಐ ಎಂ.ಎಸ್.ಸರ್ದಾರ್ ನೇತೃತ್ವದಲ್ಲಿ ಪಿಎಸ್ಐ ಮಂಗಳಗೌರಮ್ಮ, ಎಎಸ್‌ಐ ಶಿವಕುಮಾರ್, ಸಿಬ್ಬಂದಿ ಎಂ.ಆರ್. ಕುಮಾರ್, ಚಂದ್ರಮೋಹನ್, ಸಾಧಿಕ್ ಫಾಷಾ ಕಾರ್ಯಾಚರಣೆ ನಡೆಸಿದ್ದರು.

ಮಹಿಳೆ ಆತ್ಮಹತ್ಯೆ

ಮಧುಗಿರಿ: ಪಟ್ಟಣದ ಶ್ರೀನಿವಾಸ ಬಡಾವಣೆಯಲ್ಲಿ ಶನಿವಾರ ಬೆಸ್ಕಾಂ ಇಲಾಖೆಯ ನೌಕರ ಯತೀಶ್ ಎಂಬುವರ ಪತ್ನಿ ಧನಲಕ್ಷ್ಮಿ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.