ADVERTISEMENT

ಕುಣಿಗಲ್ | ಕುಡಗೋಲಿಂದ ಹಲ್ಲೆ: ತುಂಡಾದ ಎರಡು ಬೆರಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 13:30 IST
Last Updated 15 ಜುಲೈ 2024, 13:30 IST

ಕುಣಿಗಲ್: ಹಳೆ ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬುಕ್ಕಸಾಗರದ ಎರಡು ಕುಟುಂಬಗಳ ನಡುವೆ ನಡೆದ ಕಿತ್ತಾಟದಲ್ಲಿ ಕುಡಗೋಲಿನಿಂದ ಹಲ್ಲೆ ನಡೆಸಿದ ಕಾರಣ ಮಹಿಳೆಯೊಬ್ಬರ ಎರಡು ಬೆರಳು ತುಂಡಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಕುಣಿಗಲ್ ಪೊಲೀಸರು ಇಬ್ಬರನ್ನು ಸೋಮವಾರ ಬಂಧಿಸಿದ್ದಾರೆ.

ಬಂಧಿತರು ಬುಕ್ಕಸಾಗರ ಗ್ರಾಮದ ಚಂದ್ರಯ್ಯ ಅವರ ಮೊಮ್ಮಗ ಮನು. ಚಂದ್ರಯ್ಯ ಕುಡಲಿನಿಂದ ಹಲ್ಲೆ ನಡೆಸಿದ ಕಾರಣ ಸುಧಾ ಎಂಬುವರ ಎರಡು ಬೆರಳು ತುಂಡಾಗಿದೆ. ಗ್ರಾಮದ ನಾಗರಾಜು ಮತ್ತು ಚಂದ್ರಯ್ಯ ಕುಟುಂಬದ ನಡುವೆ ವೈಷಮ್ಯವಿತ್ತು. ಇಬ್ಬರು ಪರಸ್ಪರ ದೂರು ನೀಡಿದ್ದರು.

ಭಾನುವಾರ ಸಂಜೆ ನಾಗರಾಜು ಅವರ ಪತ್ನಿ ಸುಧಾ ಡೇರಿಗೆ ಹಾಲು ಹಾಕಿ ವಾಪಸ್‌ ಬರುವಾಗ ಚಂದ್ರಯ್ಯ, ಗಂಗಮ್ಮ, ಮನು ಎಂಬುವರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಕುಡಗೋಲಿನಿಂದ ಹಲ್ಲೆ ನಡೆಸಿದ ಸಮಯದಲ್ಲಿ ಸುಧಾ ಅವರ ಎಡಗೈ ತೋರ್ಬೆರಳು, ಮಧ್ಯದ ಬೆರಳು ತುಂಡಾಗಿ ಬಿದ್ದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.