ADVERTISEMENT

ತುಮಕೂರು | ಅಥ್ಲೆಟಿಕ್ಸ್‌: ಶಿವಲಿಂಗಮ್ಮ, ವಿವೇಕ್‌ ಸಾಧನೆ

ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 4:19 IST
Last Updated 15 ಜೂನ್ 2025, 4:19 IST
ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆತದ ಪರಿ
ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆತದ ಪರಿ   

ತುಮಕೂರು: ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಥ್ಲೆಟಿಕ್ಸ್‌ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪುರುಷರ 800 ಮೀಟರ್‌, 1,500 ಮೀಟರ್‌ ಓಟ ಮತ್ತು ಉದ್ದ ಜಿಗಿತದಲ್ಲಿ ಎಂಸಿಎ ವಿಭಾಗದ ವಿ.ಸಿ.ವಿವೇಕ್‌ ಪ್ರಥಮ ಸ್ಥಾನ ಪಡೆದರು. ಮಹಿಳೆಯರ 800 ಮೀಟರ್‌, 1,500 ಮೀಟರ್‌ ಓಟದಲ್ಲಿ ಭೌತವಿಜ್ಞಾನದ ಬಿ.ಕೆ.ಶಿವಲಿಂಗಮ್ಮ ವೇಗದ ಓಟಗಾರ್ತಿಯಾಗಿ ಗುರುತಿಸಿಕೊಂಡರು. 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಯೋಗೀಶ್‌, ಶಿಲ್ಪಾ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ವಿವಿಧ ಸ್ಪರ್ಧೆಗಳ ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ADVERTISEMENT

ಪುರುಷರ ವಿಭಾಗ: 100 ಮೀಟರ್‌ ಓಟ– ಪಿ.ಯೋಗೀಶ್‌ (ಇಂಗ್ಲಿಷ್‌), ಬಿ.ಅಭಿಷೇಕ್‌ (ಸಮಾಜಶಾಸ್ತ್ರ), ದಿಶಂತ್‌ (ಇಂಗ್ಲಿಷ್‌). 200 ಮೀ– ದಿಶಂತ್‌ (ಇಂಗ್ಲಿಷ್‌), ಡಿ.ಎನ್‌.ಪ್ರಕಾಶ್‌ (ಸಾರ್ವಜನಿಕ ಆಡಳಿತ), ಎಂ.ಪವನ್‌ಕುಮಾರ್‌ (ಇತಿಹಾಸ). 800 ಮೀ– ವಿ.ಸಿ.ವಿವೇಕ್‌ (ಎಂಸಿಎ), ಬಿ.ಅಭಿಷೇಕ್‌ (ಸಮಾಜಶಾಸ್ತ್ರ), ಗಂಗರಾಜು (ಭೌತವಿಜ್ಞಾನ). 1,500 ಮೀ– ವಿ.ಸಿ.ವಿವೇಕ್‌ (ಎಂಸಿಎ), ಬಿ.ಅಭಿಷೇಕ್‌ (ಸಮಾಜಶಾಸ್ತ್ರ), ಎ.ಎಂ.ಉಮಾಶಂಕರ್‌ (ಜೀವವಿಜ್ಞಾನ).

ಡಿಸ್ಕಸ್‌ ಥ್ರೋ– ದಿಲೀಪ್‌ಕುಮಾರ್‌ (ಎಂಸಿಎ), ಇ.ವಿಜಯ್‌ಕುಮಾರ್‌ (ರಾಜ್ಯಶಾಸ್ತ್ರ), ಬಿ.ಆರ್‌.ನಿಖಿಲ್‌ (ಎಂಬಿಎ). ಜಾವೆಲಿನ್‌ ಎಸೆತ– ಕೆ.ಎಲ್‌.ಚೇತನ್‌ (ರಸಾಯನ ವಿಜ್ಞಾನ), ರಘು (ಇಂಗ್ಲಿಷ್‌), ಜಿ.ಎಸ್‌.ಯೋಗೇಶ್‌ (ಇಂಗ್ಲಿಷ್‌). ಶಾಟ್‌ಪುಟ್‌ ಎಸೆತ– ಎಂ.ಪಿ.ಹರ್ಷಿತ್‌ (ಎಂಬಿಎ), ದಿಲೀಪ್‌ಕುಮಾರ್‌ (ಎಂಸಿಎ), ಆರ್‌.ಡಿ.ಯೋಗಾನಂದ (ರಸಾಯನ ವಿಜ್ಞಾನ). ಉದ್ದ ಜಿಗಿತ– ವಿ.ಸಿ.ವಿವೇಕ್‌ (ಎಂಎಸ್‌ಸಿ), ಡಿ.ಆರ್‌.ಸತೀಶ್‌ (ಇಂಗ್ಲಿಷ್‌), ಶ್ರೀನಿವಾಸ್‌ (ರಸಾಯನ ವಿಜ್ಞಾನ).

ಮಹಿಳೆಯರ ವಿಭಾಗ: 100 ಮೀಟರ್‌ ಓಟ– ಶಿಲ್ಪಾ ಉಪ್ಪಿನ ಪರಿಸ್‌ (ಎಂಎಸ್‌ಡಬ್ಲೂ), ಪಿ.ಕೆ.ಮಾನಸ (ಮನೋವಿಜ್ಞಾನ), ವೈ.ಎನ್‌.ಸ್ಫೂರ್ತಿ (ರಸಾಯನ ವಿಜ್ಞಾನ). 200 ಮೀ– ಸೌಜನ್ಯಾ (ಮನೋವಿಜ್ಞಾನ), ಬಿ.ಬಿ.ಚಿಂತನಾ (ರಸಾಯನ ವಿಜ್ಞಾನ), ಎಂ.ಜಿ.ಚಿತ್ರಾಶ್ರೀ (ಗಣಿತ). 800 ಮೀ– ಬಿ.ಕೆ.ಶಿವಲಿಂಗಮ್ಮ (ಭೌತ ವಿಜ್ಞಾನ), ಕೆ.ಎಸ್‌.ಪದ್ಮಾ (ವಾಣಿಜ್ಯ ಶಾಸ್ತ್ರ), ಎಸ್‌.ಶಾಂತಾ (ರಸಾಯನ ವಿಜ್ಞಾನ). 1,500 ಮೀ– ಬಿ.ಕೆ.ಶಿವಲಿಂಗಮ್ಮ (ಭೌತ ವಿಜ್ಞಾನ), ಬಿ.ಸಿ.ಕಾವ್ಯಾ (ಗಣಿತ), ಅಕ್ಷತಾ (ರಾಜ್ಯಶಾಸ್ತ್ರ).

ಡಿಸ್ಕಸ್‌ ಥ್ರೋ– ಪಿ.ನಿಸರ್ಗ (ರಸಾಯನ ವಿಜ್ಞಾನ), ಬಿ.ವಿ.ರೇಖಾ (ಭೌತ ವಿಜ್ಞಾನ), ಬಿ.ಎಚ್‌.ಜ್ಯೋತಿ (ಇತಿಹಾಸ). ಜಾವೆಲಿನ್‌ ಎಸೆತ– ಎಂ.ಮೌನಿಕಾ (ಆಹಾರ ವಿಜ್ಞಾನ ಮತ್ತು ಪೋಷಣೆ), ಬಿ.ಎಚ್‌.ಜ್ಯೋತಿ (ಇತಿಹಾಸ), ಶಾಂಭವಿ (ಸಮಾಜಶಾಸ್ತ್ರ). ಶಾಟ್‌ಪುಟ್‌ ಎಸೆತ– ಬಿ.ವಿ.ರೇಖಾ (ಭೌತ ವಿಜ್ಞಾನ), ಎಸ್‌.ಚೈತ್ರಾ (ಎಂಎಸ್‌ಸಿ), ಶರಮ್ಯಾ (ರಸಾಯನ ವಿಜ್ಞಾನ). ಉದ್ದ ಜಿಗಿತ– ಸೌಜನ್ಯಾ (ಮನೋವಿಜ್ಞಾನ), ಬಿ.ಕೆ.ಶಿವಲಿಂಗಮ್ಮ (ಭೌತ ವಿಜ್ಞಾನ), ಎನ್‌.ಭಾರತಿಪ್ರಿಯಾ (ಗಣಿತ).

ಕ್ರೀಡಾಕೂಟದಲ್ಲಿ ಶಾಟ್‌ಪುಟ್‌ ಎಸೆದ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.