ADVERTISEMENT

ಸಮಾನತೆ ಸಾರಿದ ಜಗಜ್ಯೋತಿ: ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 9:54 IST
Last Updated 27 ಏಪ್ರಿಲ್ 2020, 9:54 IST
ಗುಬ್ಬಿಯ ಕಂದಾಯ ಭವನದಲ್ಲಿ ಬಸವ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು
ಗುಬ್ಬಿಯ ಕಂದಾಯ ಭವನದಲ್ಲಿ ಬಸವ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು   

ಗುಬ್ಬಿ: ಬಸವಣ್ಣ ಮಹಾನ್ ಮಾನವತಾವಾದಿಯಾಗಿದ್ದರು. ಸಮಾಜದಲ್ಲಿನ ಪ್ರತಿಯೊಬ್ಬರು ಸಮಾನರು ಎಂದು ವಿಶ್ವಕ್ಕೆ ಸಾರುವ ಮೂಲಕ ಸಮಾನತೆಯ ಹರಿಕಾರರಾಗಿದ್ದರು ಎಂದು ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್ ಹೇಳಿದರು.

ಪಟ್ಟಣದ ಕಂದಾಯ ಭವನದಲ್ಲಿ ಸರಳವಾಗಿ ನಡೆದ ಬಸವ ಜಯಂತಿ ಆಚರಿಸಿ ಮಾತನಾಡಿದರು.

ಮುಖಂಡರಾದ ಚಂದ್ರಶೇಖರ್ ಬಾಬು, ಪಂಚಾಕ್ಷರಯ್ಯ, ದಿಲೀಪ್ ಕುಮಾರ್ ಎಸ್.ಡಿ, ಸಿದ್ದಲಿಂಗಮೂರ್ತಿ, ದಿವ್ಯಪ್ರಕಾಶ್, ಬಸವಲಿಂಗಪ್ಪ, ವಿಶ್ವಾರಾಧ್ಯ, ವಿಶ್ವಣ್ಣ ಮಹಾಂತೇಶ್, ಬಸವರಾಜು, ಖಾನ್ ಸಾಬ್, ಶ್ರೀರಂಗ, ಸತೀಶ್
ಇದ್ದರು.

ADVERTISEMENT

ತಾಲ್ಲೂಕಿನಾದ್ಯಂತ ಬಸವ ಶರಣರು, ಶಿವಶರಣ ಬಂಧುಗಳು, ಅನುಯಾಯಿಗಳು, ಮಠಗಳಲ್ಲಿ ಹಾಗೂ ವೀರಶೈವ ಲಿಂಗಾಯತ ಮತ್ತು ಶಿವಶರಣ ನೌಕರರ ಪತ್ತಿನ ಸೌಹಾರ್ದ ಸಂಘದವರು ಸರಳವಾಗಿ ಮನೆಗಳಲ್ಲಿ ಬಸವ ಜಯಂತಿ ಆಚರಿಸಿ ಬಸವಣ್ಣನ ತತ್ವಗಳು ಮತ್ತು ವಚನಗಳನ್ನು ಸ್ಮರಿಸಿದರು.

ಬುಕ್ಕಾಪಟ್ಟಣ: ಶಿರಾ ತಾಲ್ಲೂಕು ಬುಕ್ಕಾಪಟ್ಟಣದ ಪೇಟೆ ಬೀದಿಯಲ್ಲಿರುವ ಬಸವಣ್ಣನ ದೇವಸ್ಥಾನದಲ್ಲಿ ಸರಳವಾಗಿ ಅಂತರ ಕಾಯ್ದುಕೊಂಡು ಬಸವಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.