ಕರಡಿ (ಪ್ರಾಥಮಿಕ ಚಿತ್ರ)
ಕೊರಟಗೆರೆ: ಪಟ್ಟಣದ ಶಿವಗಂಗಾ ಚಿತ್ರ ಮಂದಿರದ ಬಳಿ ಮಂಗಳವಾರ ಬೆಳಗಿನ ಜಾವ ಕರಡಿಯೊಂದು ಮುಖ್ಯ ರಸ್ತೆ ದಾಟುತ್ತಿರುವ ದೃಶ್ಯ ಅಂಗಡಿಯೊಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಗಳವಾರ ಬೆಳಿಗ್ಗೆ 4.11ರ ಸುಮಾರಿನಲ್ಲಿ ಕರಡಿ ರಸ್ತೆ ದಾಟುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
15 ದಿನಗಳ ಹಿಂದೆ ಕೋರ್ಟ್ ಕಟ್ಟಡದ ಹಿಂಭಾಗದ ಜನವಸತಿ ಪ್ರದೇಶದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಕರಡಿ ಕಾಣಿಸಿಕೊಂಡಿತ್ತು.
ಪಟ್ಟಣದ ಕೂಗಳತೆ ದೂರದಲ್ಲೆ ಬಹಳಷ್ಟು ಕ್ರಷರ್‌ಗಳಿದ್ದು, ರಾತ್ರಿವೇಳೆ ಬಂಡೆ ಸಿಡಿಸಲು ಸಿಡಿಮದ್ದುಗಳನ್ನು ಸಿಡಿಸುವ ಕಾರಣದಿಂದಾಗಿ ಕಾಡು ಪ್ರಾಣಿಗಳು ಈಚೆಗೆ ಪಟ್ಟಣದ ಒಳಕ್ಕೆ ನುಗ್ಗುವಂತಾಗಿದೆ. ಈಚಗೆ ಪಟ್ಟಣದ ಹೊರವಲಯದ ಸಿದ್ದೇಶ್ವರ ಕಲ್ಯಾಣ ಮಂಟಪದ ಬಳಿ ಚಿರತೆ ಕೂಡ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ಹೇಳಿದರು.
ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.