ತುಮಕೂರು: ಅಂತರರಾಜ್ಯ ಬೈಕ್ ಕಳ್ಳನನ್ನು ಬಂಧಿಸಿರುವ ಪೊಲೀಸರು, ₹21.60 ಲಕ್ಷ ಮೌಲ್ಯದ 42 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಮುಭಾರಕ್ ಖಾನ್ ಅಲಿಯಾಸ್ ಮಟನ್ ಮುಭಾರಕ್ (53) ಬಂಧಿತ ಕಳ್ಳ. ಸೆ. 24ರಂದು ನೆಲಮಂಗಲ ತಾಲ್ಲೂಕಿನ ಚಿಕ್ಕನಹಳ್ಳಿಯ ಕೆಂಪಗಂಗಯ್ಯ ಎಂಬುವರ ಬೈಕ್ ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಕಳುವಾಗಿತ್ತು. ಮೇಕೆ ಸಂತೆಯಲ್ಲಿ ಮೇಕೆ ಖರೀದಿಸಲು ಬಂದಿದ್ದಾಗ ಬೈಕ್ ಕಾಣೆಯಾಗಿತ್ತು. ಈ ಕುರಿತು ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಇದರ ಬೆನ್ನು ಬಿದ್ದ ಪೊಲೀಸ್ ಅಧಿಕಾರಿಗಳು ಮುಭಾರಕ್ ಖಾನ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಾಕಷ್ಟು ಕಳವು ಪ್ರಕರಣಗಳು ಹೊರ ಬಂದಿವೆ.
ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ 2, ತುಮಕೂರು ನಗರ ಠಾಣೆ 3, ಪಾವಗಡ ಠಾಣೆ 1, ಕೋಲಾರ ಜಿಲ್ಲೆ ಶ್ರೀನಿವಾಸಪುರ ಠಾಣೆ 2, ರಾಬರ್ಟ್‌ಸನ್ ಪೇಟೆ, ಯಲಹಂಕ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ನೆಲಮಂಗಲ ಠಾಣೆ ಹಾಗೂ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯ ತಲಾ ಒಂದು, ಆಂಧ್ರಪ್ರದೇಶದ ಕುಪ್ಪಂ ಪೊಲೀಸ್ ಠಾಣೆಯ 1 ಸೇರಿ ಒಟ್ಟು 15 ಪ್ರಕರಣ ಪತ್ತೆ ಮಾಡಲಾಗಿದೆ. ಪ್ರಕರಣ ದಾಖಲಾಗದ 27 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 42 ಬೈಕ್ ಜಪ್ತಿ ಮಾಡಲಾಗಿದೆ.
ಡಿವೈಎಸ್‌ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಇನ್‌ಸ್ಪೆಕ್ಟರ್ ರಾಮಪ್ರಸಾದ, ಪಿಎಸ್‌ಐ ಎಸ್.ಎಸ್.ಚೇತನ್‌ಕುಮಾರ್, ಸಿಬ್ಬಂದಿ ಜಿ.ರಮೇಶ್, ಸೌಭಾಗ್ಯಮ್ಮ, ಹನುಮರಂಗಯ್ಯ, ಶಶಿಧರ, ಮಹೇಶ್, ಗಿರೀಶ್, ಶರಣಪ್ಪ, ನದೀಂಪಾಷ, ಸಂತೋಷ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.