ADVERTISEMENT

ಬುದ್ಧನ ವಿಚಾರ ಇಂದಿಗೂ ಜೀವಂತ

​ಪ್ರಜಾವಾಣಿ ವಾರ್ತೆ
Published 13 ಮೇ 2025, 7:01 IST
Last Updated 13 ಮೇ 2025, 7:01 IST
ತುಮಕೂರಿನಲ್ಲಿ ಸೋಮವಾರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಪರಮೇಶ್ವರ, ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಮೋಹನ್‌, ಬೀದರ್‌ ಬೌದ್ಧ ವಿಹಾರದ ಭಂತೇಜಿ, ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಸೋಮವಾರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಪರಮೇಶ್ವರ, ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಮೋಹನ್‌, ಬೀದರ್‌ ಬೌದ್ಧ ವಿಹಾರದ ಭಂತೇಜಿ, ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ ಇತರರು ಉಪಸ್ಥಿತರಿದ್ದರು   

ತುಮಕೂರು: ಬುದ್ಧನ ವಿಚಾರ, ತತ್ವ, ಸಿದ್ಧಾಂತ ಸಾವಿರಾರು ವರ್ಷ ಕಳೆದರೂ ಜೀವಂತವಾಗಿವೆ. ಮುಂದೆಯೂ ಇರುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಸಿದ್ಧಾರ್ಥ ನಗರದಲ್ಲಿ ಸೋಮವಾರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಏರ್ಪಡಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುದ್ಧನ ತತ್ವ, ಸಿದ್ಧಾಂತವನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಮನುಷ್ಯ ಅನುಭವಿಸುವ ದುಃಖ, ದುಮ್ಮಾನಗಳಿಗೆ ಮುಕ್ತಿ ದೊರೆಯುವ ಮಾರ್ಗವನ್ನು ಮಾನವ ಕುಲಕ್ಕೆ ತೋರಿಸಿಕೊಟ್ಟವರು. ಅವರ ವಿಚಾರಗಳನ್ನು ಸಾಕಷ್ಟು ರಾಷ್ಟ್ರಗಳು ಅಳವಡಿಸಿಕೊಂಡು ಮುಂದುವರಿಯುತ್ತಿವೆ ಎಂದರು.

ADVERTISEMENT

ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಮೋಹನ್‌, ‘ಗೌತಮ ಬುದ್ಧ ಮಾನವ ಕುಲಕ್ಕೆ ಶಾಂತಿ ಬೋಧಿಸಿದ. ಬದುಕಿನ ಕಷ್ಟಗಳಿಗೆ ಸೂಕ್ತ ಮಾರ್ಗ ಸೂಚಿಸಿದ ಮಹಾನ್ ಚೇತನ’ ಎಂದು ಹೇಳಿದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ನಂಜುಂಡಪ್ಪ, ಬೀದರ್‌ ಬೌದ್ಧ ವಿಹಾರದ ಭಂತೇಜಿ, ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ, ಕುಲಸಚಿವ ಅಶೋಕ್‌ ಮೆಹ್ತಾ, ಪರೀಕ್ಷಾಂಗ ನಿಯಂತ್ರಕ ಗುರುಶಂಕರ್‌, ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್‌ ಕುಡುವ, ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶ್, ಎಸ್‌ಎಸ್‌ಐಟಿ ಪ್ರಾಂಶುಪಾಲ ಎಂ.ಎಸ್‌.ರವಿಪ್ರಕಾಶ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.