ADVERTISEMENT

ಕೆನರಾ ಬ್ಯಾಂಕ್‌: 71 ಶಾಖೆ ವ್ಯವಸ್ಥಾಪಕರ ಸಭೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:47 IST
Last Updated 18 ಆಗಸ್ಟ್ 2019, 5:47 IST
ಕೆನರಾ ಬ್ಯಾಂಕ್ 71 ಶಾಖೆಗಳ ವ್ಯವಸ್ಥಾಪಕರ ಸಭೆಯಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ದೆಬಶಿಶ್ ಮುಖರ್ಜಿ ಮಾತನಾಡಿದರು. ಕೆನರಾ ಬ್ಯಾಂಕ್ ತುಮಕೂರು ಕ್ಷೇತ್ರಿಯ ಕಾರ್ಯಾಲಯದ ಮುಖ್ಯಸ್ಥ ಎಸ್.ಆರ್.ರಮೇಶ್‌, ಇತರ ಅಧಿಕಾರಿಗಳಿದ್ದರು
ಕೆನರಾ ಬ್ಯಾಂಕ್ 71 ಶಾಖೆಗಳ ವ್ಯವಸ್ಥಾಪಕರ ಸಭೆಯಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ದೆಬಶಿಶ್ ಮುಖರ್ಜಿ ಮಾತನಾಡಿದರು. ಕೆನರಾ ಬ್ಯಾಂಕ್ ತುಮಕೂರು ಕ್ಷೇತ್ರಿಯ ಕಾರ್ಯಾಲಯದ ಮುಖ್ಯಸ್ಥ ಎಸ್.ಆರ್.ರಮೇಶ್‌, ಇತರ ಅಧಿಕಾರಿಗಳಿದ್ದರು   

ತುಮಕೂರು: ಕೆನರಾ ಬ್ಯಾಂಕ್ ಕ್ಷೇತ್ರಿಯ ಮಟ್ಟದ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಬರುವ ಎಲ್ಲ ಶಾಖೆಗಳ ಸಮಾಲೋಚನಾ ಸಭೆಯು ಶನಿವಾರ ತುಮಕೂರಿನಲ್ಲಿ ನಡೆಯಿತು. 71 ಶಾಖೆಗಳ ವ್ಯವಸ್ಥಾಪಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ದೆಬಶಿಶ್ ಮುಖರ್ಜಿ ಮಾತನಾಡಿ,‘ ಆರ್ಥಿಕ ವ್ಯವಸ್ಥೆಯ ವಿವಿಧ ಕ್ಷೇತ್ರಗಳಿಗೆ ಸಾಲ ಸೌಲಭ್ಯ ಹೆಚ್ಚಳ, ತಂತ್ರಜ್ಞಾನ ಬಳಕೆ ಅಧಿಕ ಗೊಳಿಸುವುದು, ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರಜಾ ಕೇಂದ್ರಿಕೃತವನ್ನಾಗಿಸುವುದು, ಹಿರಿಯ ನಾಗರಿಕರು, ಸಣ್ಣ ಉದ್ದಿಮೆದಾರರು, ಉದ್ಯಮಿಗಳು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳ ಅವಶ್ಯಕತೆ, ಆಕಾಂಕ್ಷೆಗಳಿಗೆ ಸ್ಪಂದಿಸಿ ಜವಾಬ್ದಾರಿ ನಿಭಾಯಿಸುವ ಬಗ್ಗೆ ತಿಳಿಸಿದರು.

ತುಮಕೂರು ಕ್ಷೇತ್ರಿಯ ಕಾರ್ಯಾಲಯದ ಮುಖ್ಯಸ್ಥ ಎಸ್.ಆರ್. ರಮೇಶ್‌ ಅವರು ಬ್ಯಾಂಕಿಂಗ್ ಕ್ಷೇತ್ರದ ಸವಾಲುಗಳನ್ನು ವಿವೇಚನಾಪೂರ್ವಕವಾಗಿ ನಿಭಾಯಿಸುವುದು, ಯೋಜನೆಗಳ ಬಗ್ಗೆ ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.