ADVERTISEMENT

ತುಮಕೂರು ವಿಶ್ವವಿದ್ಯಾಲಯ: ಪರೀಕ್ಷೆ ರದ್ದು; ಶುಲ್ಕ ಕಟ್ಟಬೇಕೊ, ಬೇಡವೊ ಗೊಂದಲ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:03 IST
Last Updated 13 ಆಗಸ್ಟ್ 2021, 4:03 IST
ಪೋಟೋ : 12-ಟಿಪಿಆರ್ 1: ತುಮಕುರು ವಿಶ್ವವಿದ್ಯಾಲಯದ ಹೊರಾಂಗಣ ಚಿತ್ರ.
ಪೋಟೋ : 12-ಟಿಪಿಆರ್ 1: ತುಮಕುರು ವಿಶ್ವವಿದ್ಯಾಲಯದ ಹೊರಾಂಗಣ ಚಿತ್ರ.   

ತಿಪಟೂರು: ತುಮಕೂರು ವಿಶ್ವವಿದ್ಯಾಲಯ ಪದವಿಯ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಪಡಿಸಿ ಆದೇಶ ಹೊರಡಿಸಿದೆ. ಆದರೆ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಬೇಕೊ, ಬೇಡವೊ ಎಂಬ ಗೊಂದಲದಲ್ಲಿದ್ದಾರೆ.

ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಆಗಸ್ಟ್ 11ರಂದು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್‌ಗೆ ಮುಂಬಡ್ತಿ ನೀಡುವಂತೆ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ ಪರೀಕ್ಷಾ ಶುಲ್ಕ ಕಟ್ಟದಂತೆ ಎಲ್ಲಿಯೂ ತಿಳಿಸಿಲ್ಲ.

ಪದವಿ ಕಾಲೇಜುಗಳು ಮೊದಲ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಂದ ₹1,000 ಹಾಗೂ ಬಾಕಿ ಇರುವ ವಿಷಯಗಳಿಗೆ ₹100 ಪರೀಕ್ಷಾ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ. ಆಗಸ್ಟ್ 16ರಂದು ಪರೀಕ್ಷಾ ಶುಲ್ಕ ಕಟ್ಟಲು ಕಡೆ ದಿನ. ಆಗಸ್ಟ್ 23ಕ್ಕೆ ದಂಡ ಸಹಿತ ಪಾವತಿಸಬೇಕು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಮರು ಪ್ರಶ್ನೆ ಮಾಡದೇ ಶುಲ್ಕ ಪಾವತಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.