ADVERTISEMENT

ಪಾವಗಡ | ಆಯುಧ ತೋರಿಸಿ ಬೆದರಿಕೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:36 IST
Last Updated 8 ಫೆಬ್ರುವರಿ 2026, 4:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಪಾವಗಡ: ತಾಲ್ಲೂಕಿನ ಕನಿಕಲ ಬಂಡೆಯಲ್ಲಿ ಗುಂಪುಗಳ ನಡುವೆ ನಡೆದ ಜಗಳದ ವಿಚಾರವಾಗಿ ಜಾತಿ ನಿಂದನೆ ಪ್ರಕರಣ ದಾಖಲಾಗಿವೆ.

ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಅಡ್ಡ ಬಂದು ಆಯುಧ ತೋರಿಸಿ‌, ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅನಿಲ್‌ಗೆ ಬೆಂಬಲ ಸೂಚಿಸುವಂತಿಲ್ಲ. ಹಿಂದಿನಂತೆ ಈ ಬಾರಿಯೂ ನನ್ನ ಪತ್ನಿಗೆ ಅವಿರೋಧ ಆಯ್ಕೆಯಾಗಲು ಬೆಂಬಲ ನೀಡಬೇಕು ಎಂದು ಬೆದರಿಕೆ ಒಡ್ಡಿ ಜಾತಿ ನಿಂದನೆ ಮಾಡಿದ್ದಾರೆ’ ಎಂದು ವೆಂಕಟೇಶ್ ಹಾಗೂ ನರಸಿಂಹ ಮೂರ್ತಿ ವಿರುದ್ಧ ಕನಿಕಲ ಬಂಡೆ ಗ್ರಾಮದ ನರಸಿಂಹ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಇದೇ ಗ್ರಾಮದ ಗಿರಿಯಪ್ಪ ಎಂಬುವರು ತನ್ನ ತಾಯಿ ಕೆಲಸ ಮಾಡುವಾಗ ಜಮೀನು ಬರೆದುಕೊಡುವಂತೆ ಬೆದರಿಕೆ ಒಡ್ಡಿ ಜಾತಿ ನಿಂದನೆ ಮಾಡಿದ್ದಾರೆ. ಅಕ್ಕಲಪ್ಪ ಎಂಬ ವ್ಯಕ್ತಿಗೂ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವೆಂಕಟೇಶ್ ಹಾಗೂ ನರಸಿಂಹ ಮೂರ್ತಿ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ.

ಪಟ್ಟಣ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.