
ತುಮಕೂರು: ಕೊಬ್ಬರಿ, ಶೇಂಗಾ ಬೀಜದ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು, ಅಡುಗೆ ಎಣ್ಣೆ ದುಬಾರಿಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆ ಕೆ.ಜಿ ₹550–600, ಕಡಲೆಕಾಯಿ ಎಣ್ಣೆ ಕೆ.ಜಿ ₹180–370ರ ವರೆಗೆ ಹೆಚ್ಚಳವಾಗಿದೆ.
ಮುಂದಿನ ದಿನಗಳಲ್ಲಿ ಕೊಬ್ಬರಿ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಎಣ್ಣೆ ಬೆಲೆಯೂ ಏರಿಕೆಯಾಗಲಿದೆ. ಶೇಂಗಾ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಧಾರಣೆ ಅಲ್ಪ ಪ್ರಮಾಣದಲ್ಲಿ ತಗ್ಗಬಹುದು.
ತರಕಾರಿ: ವಾರದಿಂದ ವಾರಕ್ಕೆ ತರಕಾರಿ ಬೆಲೆ ಇಳಿಕೆಯತ್ತಲೇ ಸಾಗಿದ್ದು, ಬಟಾಣಿ ಮತ್ತಷ್ಟು ಅಗ್ಗವಾಗಿದೆ. ತೊಂಡೆಕಾಯಿ, ನುಗ್ಗೆಕಾಯಿ, ಟೊಮೆಟೊ ಕಡಿಮೆಯಾಗಿದೆ. ಆಲೂಗೆಡ್ಡೆ, ಗೆಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ಕ್ಯಾಪ್ಸಿಕಂ, ಸೌತೆಕಾಯಿ, ಶುಂಠಿ ತುಸು ತೇಜಿಯಾಗಿದೆ. ಬೆಳ್ಳುಳ್ಳಿ ಒಮ್ಮೆಲೆ ಕೆ.ಜಿ.ಗೆ ₹50 ಏರಿಕೆ ದಾಖಲಿಸಿದೆ.
ಸೊಪ್ಪು ಚೇತರಿಕೆ: ಇಳಿಕೆಯತ್ತ ಮುಖ ಮಾಡಿದ್ದ ಸೊಪ್ಪು ಕೊಂಚ ಚೇತರಿಸಿಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40ಕ್ಕೆ, ಸಬ್ಬಕ್ಕಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಹೆಚ್ಚಳವಾಗಿದೆ.
ಕರಬೂಜ ದುಬಾರಿ: ಬೇಸಿಗೆ ಬಿಸಿಲಿನ ತಾಪ ಬಿರುಸಾಗುತ್ತಿದ್ದು, ಪಾನೀಯಗಳಿಗೆ ಬಳಸುವ ಹಣ್ಣುಗಳು ದುಬಾರಿಯಾಗಿವೆ. ಕರಬೂಜ ಒಮ್ಮೆಲೆ ದುಪ್ಪಟ್ಟಾಗಿದೆ. ಪೈನಾಪಲ್ ಸಹ ಅಲ್ಪ ಏರಿಕೆಯಾಗಿದೆ.
ಅಡುಗೆ ಎಣ್ಣೆ: ಪಾಮಾಯಿಲ್ ಇಳಿಕೆಯಾಗಿದ್ದು, ಶೇಂಗಾ ಎಣ್ಣೆ ಹೆಚ್ಚಳವಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹165–167, ಪಾಮಾಯಿಲ್ ಕೆ.ಜಿ ₹120–122, ಕಡಲೆಕಾಯಿ ಎಣ್ಣೆ ಕೆ.ಜಿ ₹180ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಶೇಂಗಾ ಇಳಿಕೆ: ಹಿಂದಿನ ವಾರ ಗಗನಮುಖಿಯಾಗಿದ್ದ ಶೇಂಗಾ ಈಗ ತುಸು ಕಡಿಮೆಯಾಗಿದೆ. ಧಾನ್ಯ ಬೆಲೆ ಏರಿಕೆಯತ್ತಲೇ ಸಾಗಿದ್ದರೆ, ಬೇಳೆಕಾಳುಗಳು ಅಲ್ಪ ತಗ್ಗಿವೆ. ಸಕ್ಕರೆ, ಗೋಧಿ ಏರಿಕೆ ದಾಖಲಿಸಿದೆ.
ಬ್ಯಾಡಗಿ ಮೆಣಸು: ಆಕಾಶದತ್ತ ಮುಖ ಮಾಡಿದ್ದ ಬ್ಯಾಡಗಿ ಮೆಣಸಿನಕಾಯಿ ಧಾರಣೆ ಕೊಂಚ ಇಳಿಕೆಯಾಗಿದೆ. ಖಾರದ ಮೆಣಸಿನಕಾಯಿ ಸಹ ತುಸು ಇಳಿದಿದೆ. ಕಾಳು ಮೆಣಸು ಏರಿದ್ದರೆ, ಚಕ್ಕೆ, ಲವಂಗ ಬೆಲೆ ಕಡಿಮೆಯಾಗಿದೆ. ಒಣಹಣ್ಣುಗಳು ದುಬಾರಿ ಸ್ಥಿತಿಯಲ್ಲೇ ಇವೆ.
ಧನ್ಯ ಕೆ.ಜಿ ₹120–130, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹420–450, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹200–210, ಕಾಳುಮೆಣಸು ಕೆ.ಜಿ ₹740–760, ಜೀರಿಗೆ ಕೆ.ಜಿ ₹270–280, ಚಕ್ಕೆ ಕೆ.ಜಿ ₹265–275, ಲವಂಗ ಕೆ.ಜಿ ₹720–780, ಗುಣಮಟ್ಟದ ಗಸಗಸೆ ಕೆ.ಜಿ ₹1,550–1,600, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹860–880, ಗೋಡಂಬಿ ಕೆ.ಜಿ ₹800–900, ಒಣದ್ರಾಕ್ಷಿ ಕೆ.ಜಿ ₹450–460ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ: ಕೋಳಿ ಮಾಂಸದ ಧಾರಣೆ ತುಸು ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹165, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್‌ಲೆಸ್ ಕೆ.ಜಿ ₹265, ಫಾರಂ ಕೋಳಿ ಕೆ.ಜಿ ₹125ಕ್ಕೆ ಇಳಿಕೆಯಾಗಿದೆ. ಮೊಟ್ಟೆ ₹5.65ಕ್ಕೆ ಸಿಗುತ್ತಿದೆ.
ಮೀನು ದುಬಾರಿ: ಮೀನಿನ ಬೆಲೆ ಗಗನಮುಖಿಯಾಗಿದೆ. ಬಂಗುಡೆ ಕೆ.ಜಿ ₹480, ಬೂತಾಯಿ ಕೆ.ಜಿ ₹450, ಬೊಳಿಂಜರ್ ₹320, ಅಂಜಲ್ ಕೆ.ಜಿ ₹960, ಬಿಳಿಮಾಂಜಿ ₹1,680, ಕಪ್ಪುಮಾಂಜಿ ₹910, ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹510, ಏಡಿ ಕೆ.ಜಿ 960ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.
ದರ ಪಟ್ಟಿ.....
ಹಣ್ಣು (ಬೆಲೆ ಕೆ.ಜಿ ₹)
ಸೇಬು;230–300
ದಾಳಿಂಬೆ;280
ಮೂಸಂಬಿ;90
ಕಿತ್ತಳೆ;70–100
ಸಪೋಟ;100
ಏಲಕ್ಕಿಬಾಳೆ;87
ಪಚ್ಚಬಾಳೆ;32
ಸೀಬೆ;100
ಪೈನಾಪಲ್;100
ಪಪ್ಪಾಯ;34
ಕರಬೂಜ;70
ಕಲ್ಲಂಗಡಿ;30
ದ್ರಾಕ್ಷಿ;150–300
ಡ್ರ್ಯಾಗನ್ ಫ್ರೂಟ್;250–300
ಸೀತಾಫಲ;300
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;105–120
ಕಡಲೆ ಬೇಳೆ;75–80
ಉದ್ದಿನ ಬೇಳೆ;120–140
ಹೆಸರು ಬೇಳೆ;105–110
ಕಡಲೆಕಾಳು;70–75
ಹೆಸರು ಕಾಳು;110–130
ಅಲಸಂದೆ;90–95
ಅವರೆಕಾಳು;85–90
ಹುರುಳಿಕಾಳು;45–50
ಹುರಿಗಡಲೆ;85–90
ಬಟಾಣಿ;80–85
ಕಡಲೆ ಬೀಜ;180–190
ಗೋಧಿ;42–45
ಸಕ್ಕರೆ;42–43
ಬೆಲ್ಲ ಕೆ.ಜಿ ₹50–55
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;30–40
ಕ್ಯಾರೇಟ್;25–30
ಬೀಟ್ರೂಟ್;25–30
ಈರುಳ್ಳಿ;20–25
ಬೆಳ್ಳುಳ್ಳಿ;150–160
ಟೊಮೆಟೊ;15–20
ಆಲೂಗೆಡ್ಡೆ;25–30
ಗೆಡ್ಡೆಕೋಸು;25–30
ಮೂಲಂಗಿ;15–20
ಬೆಂಡೆಕಾಯಿ;30–35
ಬದನೆಕಾಯಿ;30–40
ಎಲೆಕೋಸು;15–20
ಹೂಕೋಸು(1ಕ್ಕೆ);30
ತೊಂಡೆಕಾಯಿ;30–40
ಹಾಗಲಕಾಯಿ;30–40
ಬಟಾಣಿ;30–40
ನುಗ್ಗೆಕಾಯಿ;80–100
ಮೆಣಸಿನಕಾಯಿ;70–80
ಕ್ಯಾಪ್ಸಿಕಂ;50–60
ಶುಂಠಿ;50–60
ಸೌತೆಕಾಯಿ 1ಕ್ಕೆ;8–10
ನಿಂಬೆಹಣ್ಣು 1ಕ್ಕೆ;2–3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.