ತುಮಕೂರು: ಇಳಿಕೆಯತ್ತ ಮುಖಮಾಡಿದ್ದ ಉಂಡೆ ಕೊಬ್ಬರಿ ಧಾರಣೆ ಮತ್ತೆ ಚೇತರಿಸಿಕೊಂಡಿದ್ದು, ಗುರುವಾರ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ₹30,400ಕ್ಕೆ ಏರಿಕೆಯಾಗಿದೆ.
ಕನಿಷ್ಠ ಕ್ವಿಂಟಲ್ ₹27,555, ಮಾದರಿ ₹29,500ಕ್ಕೆ ಮಾರಾಟವಾಗಿದೆ. 3,409 ಕ್ವಿಂಟಲ್ ಆವಕವಾಗಿತ್ತು.
ಜೂನ್ 30ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್ ₹31,606ಕ್ಕೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ನಂತರ ಮೂರು ದಿನಗಳ ಅಂತರದಲ್ಲಿ ಕ್ವಿಂಟಲ್‌ಗೆ ₹3,606 ಕುಸಿದು, ಗರಿಷ್ಠ ಧಾರಣೆ ₹28,000ಕ್ಕೆ ಇಳಿಕೆಯಾಗಿತ್ತು. ಆವಕದಲ್ಲಿ ಹೆಚ್ಚಳವಾದಂತೆ ಬೆಲೆ ಕುಸಿದಿತ್ತು.
ಜುಲೈ 7ರಂದು ಕೊಂಚ ಏರಿಕೆಯಾಗಿ ಕ್ವಿಂಟಲ್ ₹28,669ಕ್ಕೆ ಜಿಗಿತ ಕಂಡಿತ್ತು. ಮತ್ತೆ ಮೂರು ದಿನಗಳ ಅಂತರದಲ್ಲಿ ₹1731 ಏರಿಕೆಯಾಗಿ, ಈಗ ₹30,400ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.