
ಕೊಡಿಗೇನಹಳ್ಳಿ: ಕಳೆದ ನಾಲ್ಕೈದು ದಿನಗಳಿಂದ ಕಡಿಮೆ ತಾಪಮಾನದಿಂದ ಉಂಟಾಗಿರುವ ಕೊರೆಯುವ ಚಳಿಗೆ ಜನರು ಹೈರಾಣಾಗಿದ್ದಾರೆ.
ದಿನೇದಿನೇ ಉಷ್ಣಾಂಶ ಪ್ರಮಾಣ ಇಳಿಮುಖವಾಗುತ್ತಿರುವುದು ಈ ಭಾಗದಲ್ಲಿನ ಜನರನ್ನು ನಡುಗಿಸುವಂತಾಗಿದೆ. ಮೈ ಕೊರೆಯುವ ಚಳಿಯಿಂದಾಗಿ ಅದೆಷ್ಟೊ ಜನರು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಒಂದು ವಾರದಿಂದ ಮಧುಗಿರಿ ತಾಲ್ಲೂಕಿನಲ್ಲಿ ಚುಮು ಚುಮು ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ.
ಹಗಲಿನಲ್ಲೂ ತಣ್ಣನೆ ವಾತಾವರಣ ಇದ್ದು ಜನ ಸ್ವೆಟರ್, ಜಾಕೆಟ್ ಸೇರಿದಂತೆ ಬೆಚ್ಚನೆ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಬೆಚ್ಚನೆಯ ಬಟ್ಟೆ ಇತರೆ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚು ಚಳಿ ಇರುವುದರಿಂದ ದೇಹವನ್ನು ರಕ್ಷಿಸಿಕೊಳ್ಳಲು ಮಕ್ಕಳು, ಕಿವಿ ಮುಚ್ಚಿಕೊಳ್ಳುವ ಮಫ್ಲರ್, ಕ್ಯಾಪ್‌ಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.