ADVERTISEMENT

ಕುಕ್ಕರ್‌, ಡಿನ್ನರ್ ಸೆಟ್ ಸಂಗ್ರಹ: ನಾಲ್ವರು ‘ಕೈ’ ಮುಖಂಡರಿಗೆ ತಲಾ ₹ 50,000 ದಂಡ

ಅನುಮತಿ ಇಲ್ಲದೆ ಡಿನ್ನರ್ ಸೆಟ್ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 18:46 IST
Last Updated 23 ಜನವರಿ 2023, 18:46 IST
   

ಕುಣಿಗಲ್: ಅನುಮತಿ ಇಲ್ಲದೆ ಗೋದಾಮಿನಲ್ಲಿ ಕುಕ್ಕರ್‌, ಡಿನ್ನರ್ ಸೆಟ್ ಸಂಗ್ರಹ ಮಾಡಿದ್ದ ನಾಲ್ವರು ಕಾಂಗ್ರೆಸ್ ಮುಖಂಡರಿಗೆ ವಾಣಿಜ್ಯ ತೆರಿಗೆ ಇಲಾಖೆಯು ತಲಾ ₹50 ಸಾವಿರ ದಂಡ ವಿಧಿಸಿದೆ.

ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್ ಮುಖಂಡರು ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರಿಗೆ ವಿತರಿಸಲು ನಾಲ್ಕು ಲಾರಿ ಲೋಡ್ ಡಿನ್ನರ್ ಸೆಟ್ ದಾಸ್ತಾನು ಮಾಡಿದ್ದರು. ಈ ಬಗ್ಗೆ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್ ನೀಡಿದ ದೂರಿನ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಬಿಲ್‌ನಲ್ಲಿ ನಮೂದಾಗಿರುವ ಗೋದಾಮಿನ ಸ್ಥಳಕ್ಕೂ ಹಾಗೂ ಸಂಗ್ರಹವಾಗಿರುವ ಸ್ಥಳಕ್ಕೂ ತಾಳೆಯಾಗಿರಲಿಲ್ಲ. ಹಾಗಾಗಿ, ಸ್ಥಳೀಯ ಕಾಂಗ್ರೆಸ್‌ ಮುಖಂಡರಾದ ರಂಗಣ್ಣಗೌಡ, ಚೇತನ್, ಹುಲ್ಲೂರಯ್ಯ ಮತ್ತು ಎಸ್.ಎಚ್. ಎಂಟರ್ ಪ್ರೈಸಸ್‌ಗೆ ದಂಡ ವಿಧಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ನಾಗರಾಜು ತಿಳಿಸಿದ್ದಾರೆ. ತಾಳೆಯಾದ ಡಿನ್ನರ್ ಬಾಕ್ಸ್‌ಗಳ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.