ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಜೆ.ಶ್ರೀಧರ್ ಹಾಗೂ ಉಪಾಧ್ಯಕ್ಷರಾಗಿ ಕೆಂಪೇಗೌಡ ಅವಿರೋಧವಾಗಿ ಗುರುವಾರ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ದಬ್ಬೇಘಟ್ಟ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಫ್ರಭು ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಸಹಕಾರ ಸಂಘದ ನಿರ್ದೇಶಕ ಕೆ.ಬಿ.ಮಂಜಣ್ಣ, ಯೋಗೇಂದ್ರಕುಮಾರ್, ಆದಿಶೇಷ, ವಿಶಾಲಾಕ್ಷಿ, ಕಮಲಮ್ಮ, ಬಿ.ಸಿ.ಗಿರೀಶ್, ಚಲುವೇಗೌಡ, ಮಹಾಲಿಂಗಯ್ಯ, ಗಿರೀಶ್, ಬಿ.ಜಿ.ಅನಿತ ಮುಖಂಡರಾದ ಬಿಗನೇನಹಳ್ಳಿ ರವೀಂದ್ರಕುಮಾರ್, ಮಂಜಣ್ಣ, ಕ್ಯಾಮಸಂದ್ರ ರತೀಶ್, ತಮ್ಮಣ್ಣಗೌಡ, ಹುಲಿಕಲ್ ಜಗದೀಶ್, ಮೇಲ್ವಿಚಾರಕ ಹರೀಶ್, ಸಿಇಒ ಪರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.