ADVERTISEMENT

ಕೋವಿಡ್ ಜನಜಾಗೃತಿ ಯಾತ್ರೆ

ಜಿಲ್ಲೆಯ ಆಯ್ದ 30 ಗ್ರಾಮಗಳಲ್ಲಿ ಸಂಚಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 7:19 IST
Last Updated 21 ಜನವರಿ 2022, 7:19 IST
ತುಮಕೂರಿನಲ್ಲಿ ಗುರುವಾರ ಕೋವಿಡ್ ತಡೆಗೆ ಜಾಗೃತಿ ಮೂಡಿಸುವ ರಥ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಡಿಎಚ್‌ಓ ಡಾ.ನಾಗೇಂದ್ರಪ್ಪ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪನಿರ್ದೇಶಕ ಜಿ.ಡಿ.ಹಳ್ಳಿಕೇರಿ, ಸಿಇಓ ಕೆ.ವಿದ್ಯಾಕುಮಾರಿ ಮೊದಲಾದವರು ಇದ್ದರು

ತುಮಕೂರು: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಆರಂಭಿಸಿರುವ ಕೋವಿಡ್ ತಡೆಗೆ ಜಾಗೃತಿ ಮೂಡಿಸುವ ರಥ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಗುರುವಾರ ನಗರದಲ್ಲಿ ಚಾಲನೆ ನೀಡಿದರು.

ಜನಜಾಗೃತಿ ರಥ ಜ. 29ರ ವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ 30 ಹಳ್ಳಿಗಳಲ್ಲಿ ಸಂಚರಿಸಲಿದೆ. ಸಂಗೀತ ಮತ್ತು ನಾಟಕ ಕಲಾ ತಂಡಗಳಿಂದ ಜಾಗೃತಿ ಗೀತೆ, ನಾಟಕ, ಮ್ಯಾಜಿಕ್ ಶೋಗಳ ಮೂಲಕ ಕೋವಿಡ್ ಮತ್ತು ಓಮೈಕ್ರಾನ್‌ ಹರಡುವಿಕೆ ಮತ್ತು ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲಿದೆ.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕ ಜಿ.ಡಿ. ಹಳ್ಳಿಕೇರಿ, ಎಸ್. ರಾಮಕೃಷ್ಣ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.