ADVERTISEMENT

ತುಮಕೂರು: ಒಂದೇ ದಿನ 95 ಮಂದಿಗೆ ಕೊರೊನಾ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:55 IST
Last Updated 10 ಜುಲೈ 2020, 14:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 95 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದೇ ಮೊದಲ ಸಲ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದಿದ್ದಾರೆ.

ಈ ಮೂಲಕ ಸೋಂಕಿತರ ಸಂಖ್ಯೆ 428ಕ್ಕೆ ಏರಿದೆ. ಮತ್ತೆ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೆ ಹೆಚ್ಚಳವಾಗಿದೆ. ತುಮಕೂರು ನಗರದಲ್ಲಿ ಅತಿಹೆಚ್ಚು 69 ಮಂದಿಗೆ ಕೋವಿಡ್ ದೃಢ‍ಪಟ್ಟಿದೆ. ತುಮಕೂರಿನ ಸದಾಶಿವನಗರದ ವ್ಯಕ್ತಿ ಹಾಗೂ ಪಿ.ಎಚ್‌.ಕಾಲೊನಿಯ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ.

25 ಪೊಲೀಸರು, ಒಬ್ಬ ಸರ್ಕಾರಿ ಅಧಿಕಾರಿ, ಇಬ್ಬರು ಗರ್ಭಿಣಿಯರು, ಒಬ್ಬರು ಬಾಣಂತಿ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡವರೂ ಸೋಂಕಿಗೆ ತುತ್ತಾಗಿದ್ದಾರೆ. ತುಮಕೂರು ಹೊರತುಪಡಿಸಿದರೆ ಪಾವಗಡ, ಶಿರಾ ಮತ್ತು ಮಧುಗಿರಿಯಲ್ಲಿ ಸೋಂಕಿತರು ಹೆಚ್ಚಿದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಿಗೆ ಈಗಾಗಲೇ ಸೋಂಕು ಹರಡಿದೆ. ಮತ್ತಷ್ಟು ಪಸರಿಸುವ ಸಾಧ್ಯತೆ ದಟ್ಟವಾಗಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ADVERTISEMENT

ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುವ ನೌಕರರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ನಾಲ್ಕು ಮಂದಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸೋಂಕು ದೃಢವಾಗಿದೆ. ಇವರನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲಾಗಿತ್ತು.

ತಾಲ್ಲೂಕು;ಇಂದಿನ ಸೋಂಕಿತರು;ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;0;28;0
ಗುಬ್ಬಿ;0;27;0
ಕೊರಟಗೆರೆ;3;34;1
ಕುಣಿಗಲ್;0;23;1
ಮಧುಗಿರಿ;2;41;0
ಪಾವಗಡ;4;51;0
ಶಿರಾ;17;44;1
ತಿಪಟೂರು;0;17;0
ತುಮಕೂರು;69;153;10
ತುರುವೇಕೆರೆ;0;10;0
ಒಟ್ಟು;95;428;13

***

25 ಮಂದಿ ಪೊಲೀಸರಿಗೆ ಕೊರೊನಾ

25 ಕೆಎಸ್‌ಆರ್‌ಪಿ ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಗುರುವಾರ 14 ಮತ್ತು ಶುಕ್ರವಾರ 11 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಸಾರ್ವಜನಿಕ ಕೆಲಸಗಳಲ್ಲಿ ತೊಡಗುವ ಪೊಲೀಸರು ಹಾಗೂ ಅವರ ಕುಟುಂಬ ಸದಸ್ಯರಲ್ಲಿ ಇದು ಆತಂಕವನ್ನು ಮೂಡಿಸಿದೆ.

ಕರ್ತವ್ಯ ನಿಮಿತ್ತ ಬೆಂಗಳೂರಿನಲ್ಲಿದ್ದ ಜಿಲ್ಲಾ ಕೆಎಸ್‌ಆರ್‌ಪಿಯ 80 ಜನರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.