ADVERTISEMENT

ಷೇರು ಮಾರುಕಟ್ಟೆ ಹೆಚ್ಚಿನ ಲಾಭದ ಆಮಿಷ: ಕಂಪನಿ ನಿರ್ವಾಹಕನಿಗೆ ₹15 ಲಕ್ಷ ವಂಚನೆ

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಆಮಿಷ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 3:15 IST
Last Updated 21 ಅಕ್ಟೋಬರ್ 2025, 3:15 IST
<div class="paragraphs"><p>ಸೈಬರ್‌&nbsp;</p></div>

ಸೈಬರ್‌ 

   

ತುಮಕೂರು:‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ನಗರದ ಸಿದ್ಧಗಂಗಾ ಬಡಾವಣೆ ನಿವಾಸಿ, ಖಾಸಗಿ ಕಂಪನಿಯೊಂದರ ನಿರ್ವಾಹಕ ಶರತ್‌ ಬಾಬು ಎಂಬುವರು ₹15.31 ಲಕ್ಷ ಕಳೆದುಕೊಂಡಿದ್ದಾರೆ.

ಫೇಸ್‌ ಬುಕ್‌ನಲ್ಲಿ ಷೇರು ಮಾರುಕಟ್ಟೆ ಜಾಹೀರಾತು ವೀಕ್ಷಿಸಿ ಅದರಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ್ದಾರೆ. ಆರೋಪಿಗಳು ಫೇಸ್‌ಬುಕ್‌ನಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಲಿಂಕ್‌ ಕಳುಹಿಸಿ, ‘ಪ್ಯೂರ್‌ ಫೋಕಸ್‌’, ‘ವಿಐಪಿ ಸರ್ವೀಸ್‌ 359’ ಗ್ರೂಪ್‌ಗಳಿಗೆ ಶರತ್‌ ಅವರನ್ನು ಸೇರ್ಪಡೆ ಮಾಡಿದ್ದಾರೆ. ಇದಾದ ಬಳಿಕ ಶರತ್‌ ‘ಯು ಪ್ರೊ’ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ.

ADVERTISEMENT

‘ನಾವು ಹೇಳಿದಂತೆ ಹಣ ವರ್ಗಾಯಿಸಿದರೆ ಅದನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡಲಾಗುವುದು’ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಶರತ್‌, ಮೊದಲ ಹಂತದಲ್ಲಿ ₹4.70ಲಕ್ಷ ವರ್ಗಾಯಿಸಿದ್ದಾರೆ. ವಾಪಸ್‌ ಕೇಳಿದಾಗ ‘ನೀವು ಇದುವರೆಗೆ ಹೂಡಿಕೆ ಮಾಡಿದ ಹಣಕ್ಕೆ ಶೇ200ರಷ್ಟು ಲಾಭ ಬಂದಿದೆ. ಸದರಿ ಹಣ ಪಡೆಯಲು ₹8.60ಲಕ್ಷ ಸೇವಾ ಶುಲ್ಕ ನೀಡಬೇಕು’ ಎಂದಿದ್ದಾರೆ. ಶರತ್‌ ಅಷ್ಟೂ ಹಣ ವರ್ಗಾವಣೆ ಮಾಡಿದ್ದಾರೆ.

ಮತ್ತೊಮ್ಮೆ ಹೂಡಿಕೆ ಮಾಡಿದ ಹಣ ಕೇಳಿದಾಗ ಇನ್ನೂ ₹3ಲಕ್ಷ ನೀಡಿದರೆ ಪೂರ್ತಿ ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋದ ವಿಷಯ ಗೊತ್ತಾಗಿದೆ. ಲಾಭದ ಹೆಸರಿನಲ್ಲಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.