ADVERTISEMENT

ತುರುವೇಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 8:01 IST
Last Updated 5 ಡಿಸೆಂಬರ್ 2025, 8:01 IST
ತುರುವೇಕೆರೆ ತಾಲ್ಲೂಕಿನ ಕಳ್ಳನಕೆರೆ ನಂಜಮ್ಮ ಅವರ ಶ್ರವಣದೋಷ ಸಮಸ್ಯೆಗೆ ಸ್ಪಂದಿಸಿದ ಶುಭ ಕಲ್ಯಾಣ್
ತುರುವೇಕೆರೆ ತಾಲ್ಲೂಕಿನ ಕಳ್ಳನಕೆರೆ ನಂಜಮ್ಮ ಅವರ ಶ್ರವಣದೋಷ ಸಮಸ್ಯೆಗೆ ಸ್ಪಂದಿಸಿದ ಶುಭ ಕಲ್ಯಾಣ್   

ತುರುವೇಕೆರೆ: ಪಟ್ಟಣಕ್ಕೆ ಗುರುವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ವಿವಿಧ ಇಲಾಖೆಗಳ ಕಾರ್ಯವೈಖರಿ ಪರಿಶೀಲಿಸಿದರು. ನಂತರ ಜನರ ಸಮಸ್ಯೆ ಆಲಿಸಿದರು.

ತಾಲ್ಲೂಕಿನ ಕಳ್ಳನಕೆರೆ ನಿವಾಸಿ ನಂಜಮ್ಮ ಅವರಿಗೆ ಶ್ರವಣದೋಷ ಇರುವುದು ಗಮನಿಸಿದ ಅವರು, ಕೂಡಲೇ ಶ್ರವಣ ದೋಷ ಮಿಷನ್ ಒದಗಿಸುವಂತೆ  ತಹಶೀಲ್ದಾರ್‌ಗೆ ಸೂಚಿಸಿದರು.

ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ಮೂಲ ಸೌಕರ್ಯ ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ 24 ಗಂಟೆ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ.ಸ್ವರೂಪಗೆ ಸೂಚಿಸಿದರು.

ADVERTISEMENT

ತುಮಕೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ಡಿಡಿಎಲ್ಆರ್ ಭಾವನ, ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.