ADVERTISEMENT

ಭೂ ಪರಿಹಾರ ನೀಡಲು ಆಗ್ರಹ

ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 15:33 IST
Last Updated 24 ಜನವರಿ 2023, 15:33 IST
ತುಮಕೂರಿನಲ್ಲಿ ಮಂಗಳವಾರ ವಿದ್ಯುತ್ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್‍ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ಗಿರೀಶ್‌, ಪದಾಧಿಕಾರಿಗಳಾದ ಗಂಗರಾಜು, ಅಶ್ವತ್ಥ ನಾರಾಯಣ, ಕಂಬೇಗೌಡ, ಪಿ.ವಿ.ಲೋಕೇಶ್ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಮಂಗಳವಾರ ವಿದ್ಯುತ್ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್‍ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ಗಿರೀಶ್‌, ಪದಾಧಿಕಾರಿಗಳಾದ ಗಂಗರಾಜು, ಅಶ್ವತ್ಥ ನಾರಾಯಣ, ಕಂಬೇಗೌಡ, ಪಿ.ವಿ.ಲೋಕೇಶ್ ಇತರರು ಭಾಗವಹಿಸಿದ್ದರು   

ತುಮಕೂರು: ವಿದ್ಯುತ್ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.

ನಗರದ ಬಿಜಿಎಸ್‌ ವೃತ್ತದಿಂದ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕದ ಮುಖಾಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಸಾಗಿತು. ಕಿಸಾನ್ ಸಭಾ ಕಾರ್ಯಕರ್ತರು, ರೈತರು ಹೆಜ್ಜೆ ಹಾಕಿದರು.

ಜಿಲ್ಲೆಯ ಹಾರೋನಹಳ್ಳಿ, ಕನ್ನೇನಹಳ್ಳಿ, ವಕ್ಕೋಡಿ ಗೊಲ್ಲರಹಟ್ಟಿ, ಕುಪ್ಪೂರು, ಮರಳೇನಹಳ್ಳಿ, ಊರುಕೆರೆ ಗ್ರಾಮದ ಹಲವು ಸರ್ವೆ ನಂಬರ್‌ಗಳಲ್ಲಿ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ, ವಿದ್ಯುತ್ ಲೈನ್‌ ಬದಲಾವಣೆ ಮಾಡಲಾಗುತ್ತಿದೆ. ಭೂಮಿ, ಗಿಡ–ಮರಗಳಿಗೆ ಪರಿಹಾರ ನೀಡದೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ಗಿರೀಶ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇರುವ ಅಲ್ಪ ಸ್ವಲ್ಪ ಭೂಮಿ ನಂಬಿ ಜೀವನ ಸಾಗಿಸುತ್ತಿದ್ದ ಪರಿಶಿಷ್ಟರು, ಹಿಂದುಳಿದ ವರ್ಗದವರು, ಬಡವರಿಗೆ ಸಂಕಷ್ಟ ಎದುರಾಗಿದೆ. ಈ ಭಾಗದಲ್ಲಿ ಪ್ರತಿ ಕುಂಟೆ ಜಮೀನು ₹10 ಲಕ್ಷದಿಂದ ₹15 ಲಕ್ಷ ಬೆಲೆ ಬಾಳುತ್ತಿದೆ. ಎತ್ತಿನಹೊಳೆ, ಹೇಮಾವತಿ ನಾಲಾ ಕಾಮಗಾರಿ, ಕೈಗಾರಿಕಾ ಕಾಮಗಾರಿಗಳಿಗೆ ಪರಿಹಾರ ನೀಡುತ್ತಿದ್ದಾರೆ. ಆದರೆ ವಿದ್ಯುತ್ ಕಾಮಗಾರಿಗಳಿಗೆ ಪರಿಹಾರ ನೀಡದೆ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಕಿಸಾನ್‌ ಸಭಾದ ಗಂಗರಾಜು, ಅಶ್ವತ್ಥ ನಾರಾಯಣ, ಕಂಬೇಗೌಡ, ಪಿ.ವಿ.ಲೋಕೇಶ್, ಕುಪ್ಪೂರು ವೆಂಕಟೇಶ್, ಶ್ರೀನಿವಾಸ್, ಓಂಕಾರಮೂರ್ತಿ, ಗಂಗರಾಜು, ರಾಜಣ್ಣ, ನಾರಾಯಣಪ್ಪ, ಗಂಗಣ್ಣ, ಹೊಸಹಳ್ಳಿ ಗಂಗಣ್ಣ, ಸುರೇಶ್, ಭೀಮಣ್ಣ, ಸಿದ್ದರಾಮಣ್ಣ, ರೇಣುಕಪ್ಪ, ಬಸವರಾಜು, ಉಮೇಶ್, ಮಧುಸೂಧನ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.