ADVERTISEMENT

ತುಮಕೂರು: ಮದ್ಯ ಮಾರಾಟ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 4:57 IST
Last Updated 12 ಜೂನ್ 2020, 4:57 IST
ಮದ್ಯ ಮಾರಾಟ ನಿಲ್ಲಿಸುವಂತೆ ಸತ್ಯಮಂಗಲ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು
ಮದ್ಯ ಮಾರಾಟ ನಿಲ್ಲಿಸುವಂತೆ ಸತ್ಯಮಂಗಲ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು   

ತುಮಕೂರು: ತಾಲ್ಲೂಕಿನ ಸತ್ಯಮಂಗಲದಲ್ಲಿ ಎಂಎಸ್‍ಐಎಲ್‌ನಿಂದ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ತಾ.ಪಂ.ಅಧ್ಯಕ್ಷ ಗಂಗಾಂಜನೇಯ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಿದ್ದೇಶ್ವರ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಮಾರುತಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಮದ್ಯ ಮಾರಾಟದ ವಿರುದ್ಧ ಪ್ರತಿಭಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮದ್ಯ ಮಾರಾಟ ಮಾಡುವ ಸ್ಥಳದ ಪಕ್ಕದಲ್ಲಿ ಡೇರಿ ಮತ್ತು ಗಣಪತಿ ದೇವಸ್ಥಾನ ಇದೆ. ಸುತ್ತಮುತ್ತಲೂ ಕೃಷಿ ಭೂಮಿ ಇದೆ. ರೈತರು ವ್ಯವಸಾಯವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮಹಿಳೆಯರು ಹಸುಗಳನ್ನು ಸಾಕಿ ಡೇರಿಗೆ ಹಾಲು ಹಾಕಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಮದ್ಯ ಮಾರಾಟದಿಂದ ಸತ್ಯಮಂಗಲ ಮತ್ತು ವಡ್ಡರಹಳ್ಳಿ ಗ್ರಾಮದ ಜನರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.

ADVERTISEMENT

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹನುಮಂತರಾಯಪ್ಪ, ರಾಮಾಂಜನಿ, ಯೋಗೀಶ್, ಮುನಿನರಸಯ್ಯ, ನಾಗರಾಜು, ಜಯಮ್ಮ, ತಿಮ್ಮಕ್ಕ, ಸವಿತಾ, ಶಿವಮ್ಮ, ಹನುಮಕ್ಕ, ರೇಣುಕಮ್ಮ, ರತ್ನಮ್ಮ, ಪುಟ್ಟಗಂಗಮ್ಮ, ನೇತ್ರಾವತಿ, ಚಂದ್ರಕಲಾ, ತಿಮ್ಮಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.