ADVERTISEMENT

ಮುದ್ದೆ, ಸಾರಿಗೆ ಮುಗಿಬಿದ್ದ ಭಕ್ತರು

ಹುಳಿಯಾರು ಹೋಬಳಿಯ ಪುರದಮಠ ಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:24 IST
Last Updated 1 ಜನವರಿ 2021, 2:24 IST
ಕೃತಿಕೋತ್ಸವದಲ್ಲಿ ದಾಸೋಹಕ್ಕೆ ಸಿದ್ಧಪಡಿಸುವ ಮುದ್ದೆ-ಸಾರಿನ ಸವಿರುಚಿಗೆ ಭಕ್ತರು ಮುಗಿಬಿದ್ದರು
ಕೃತಿಕೋತ್ಸವದಲ್ಲಿ ದಾಸೋಹಕ್ಕೆ ಸಿದ್ಧಪಡಿಸುವ ಮುದ್ದೆ-ಸಾರಿನ ಸವಿರುಚಿಗೆ ಭಕ್ತರು ಮುಗಿಬಿದ್ದರು   

ಹುಳಿಯಾರು: ಹೋಬಳಿಯ ಕೆಂಕೆರೆ ಸಮೀಪದ ಪುರದಮಠ ಚನ್ನಬಸವೇಶ್ವರಸ್ವಾಮಿಯ ಕೃತಿಕಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನಡೆ
ಯಿತು. ಕೃತಿಕೋತ್ಸವದಲ್ಲಿ ದಾಸೋಹಕ್ಕೆ ಸಿದ್ಧಪಡಿಸುವ ಮುದ್ದೆ-ಸಾರಿನ ಸವಿರುಚಿಗೆ ಭಕ್ತರು ಮುಗಿಬಿದ್ದರು.

ಬೆಳಗ್ಗೆ ಕೆಂಕೆರೆ ಕಾಳಿಕಾಂಬದೇವಿ ಹಾಗೂ ಚನ್ನಬಸವೇಶ್ವರಸ್ವಾಮಿ ಪುರದ
ಮಠದ ದೇಗುಲಕ್ಕೆ ಆಗಮಿಸಿದವು. ನಂತರ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಳಗ್ಗೆಯೇ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ತಮ್ಮ ಜಮೀನಿನಲ್ಲಿ ಬೆಳೆದಿರುವ ಧವಸ-ಧಾನ್ಯಗಳನ್ನು ಹರಕೆ ರೂಪದಲ್ಲಿ ಒಪ್ಪಿಸಿದರು. ಭಕ್ತರು ನೀಡಿದ ಕುಂಬಳಕಾಯಿ ಸೇರಿದಂತೆ ಇತರ ತರಕಾರಿಗಳಿಂದ ಸಾರು ಮತ್ತು ಮುದ್ದೆ ತಯಾರು ಮಾಡಿದರು. ಈ ವೇಳೆಗೆ ದೇಗುಲದಲ್ಲಿ ವಿಶೇಷ ಪೂಜೆ ಮುಗಿದ ನಂತರ ಸ್ವಾಮಿಯ ಉತ್ಸವ ನಡೆಯಿತು.

ಉತ್ಸವ ಮುಗಿಸಿದ ದೇವತೆಗಳು ಕೃತಿಕಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಮಹಾಪ್ರಸಾದಕ್ಕೆ ತಯಾರು ಮಾಡಿದ್ದ ಮುದ್ದೆ-ಸಾರು ಮತ್ತು ಅನ್ನ ರಾಶಿಗೆ ಪೂಜೆ ಸಲ್ಲಿಸಿ ಭಕ್ತರಿಕೆ ವಿತರಣೆ ಮಾಡಲಾಯಿತು. ಸರದಿ ಸಾಲಿನಲ್ಲಿ ನಿಂತ ಭಕ್ತರು ನಾಮುಂದು ತಾಮುಂದು ಎಂದು ಮುದ್ದೆ ಸಾರಿನ ರುಚಿ ಸವಿದರು. ಇಲ್ಲಿ ತಯಾರಿಸುವ ಸಾರಿಗೆ ಎಲ್ಲ ತರಹದ ಕಾಳುಗಳನ್ನು ಹಾಕುವುದರಿಂದ ಸಾರು ಬಹಳ ರುಚಿಯಾಗಿರುತ್ತದೆ. ಹುಳಿಯಾರು ಹೋಬಳಿ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಪಕ್ಕದ ಹೊಸದುರ್ಗ, ಅರಸೀಕೆರೆ ತಾಲ್ಲೂಕುಗಳಿಂದಲೂ ಭಕ್ತರು ಬಂದಿದ್ದು ವಿಶೇಷವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.