ADVERTISEMENT

ಜಿಲ್ಲೆ ಬರ ಮುಕ್ತಗೊಳಿಸಲು ಜಲ ಸಾಕ್ಷರತೆ

ವಿಜ್ಞಾನ ಕೇಂದ್ರದಲ್ಲಿ ನಡೆದ ಸಹಜ ಬೇಸಾಯ ಶಾಲೆಯ 10ನೇ ತಿಂಗಳ ಸಭೆಯಲ್ಲಿ ವಿ.ಎಸ್.ಪ್ರಕಾಶ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 15:54 IST
Last Updated 12 ಡಿಸೆಂಬರ್ 2018, 15:54 IST

ತುಮಕೂರು: ಜಿಲ್ಲೆಯ ಜಲದ ಜಾಡುಗಳನ್ನು ಸಮಗ್ರವಾಗಿ ಪರಿಗಣಿಸಿ ಜಿಲ್ಲೆಯನ್ನು ಬರ ಮುಕ್ತಗೊಳಿಸಲು 2019ರ ಏಪ್ರಿಲ್‌ನಲ್ಲಿ ಜಲಸಾಕ್ಷರತಾ ಸಂವಾದ ಕಾರ್ಯಾಗಾರ ಏರ್ಪಡಿಸಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದುಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿಧಿಯ ಮಾಜಿ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ಸಹಜ ಬೇಸಾಯ ಶಾಲೆಯ 10ನೇ ತಿಂಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇಲಾಖೆಗಳ ತಜ್ಞರು, ಜಲತಜ್ಞರು, ರೈತರು, ಸಂಘ-ಸಂಸ್ಥೆಗಳು ಹಾಗೂ ಪಣದಾರ ಸಮುದಾಯಗಳು ಒಟ್ಟಾರೆ ಸೇರಿ 200 ಮಂದಿ ಜಲ ಕಾರ್ಯಕರ್ತರನ್ನು ತರಬೇತುಗೊಳಿಸಿ ಜಿಲ್ಲೆಯನ್ನು ಜಲ ಬಿಕ್ಕಟ್ಟಿನಿಂದ ಹಾಗೂ ಸತತ ಬರದಿಂದ ಹೊರತರುವಂತೆ ಸಜ್ಜುಗೊಳಿಸಬೇಕಾಗಿದೆ ಎಂದರು.

ADVERTISEMENT

ಮಳೆ ನೀರು ಶೇ 30ರಷ್ಟು ಹರಿದು ಹೋಗುತ್ತಿದೆ ಎಂಬುದು ಸುಳ್ಳು, ಇಂದು ಅದು ಶೂನ್ಯಗೊಂಡಿದೆ. ಜಲ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಅಂಕಿ- ಅಂಶಗಳು 30 ವರ್ಷ ಹಿಂದಿನವು ನಮ್ಮ ತಲೆಯಲ್ಲಿವೆ. ಪರಿಸರದಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದು, ಜಲ ಸಂಪನ್ಮೂಲಗಳ ಕುರಿತು ಅಂಕಿ ಅಂಶಗಳ ಕೊರತೆ ಉಂಟಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜ್ಞಾನ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿಶ್ವನಾಥ್ ಮಾತನಾಡಿದರು. ಬಿ.ಮರುಳಯ್ಯ, ಎನ್.ಇಂದಿರಮ್ಮ, ರಾಮಕೃಷ್ಣಪ್ಪ, ಡಾ.ಮಂಜುನಾಥ್, ಡಾ.ನಾಗೇಂದ್ರ, ಎ.ಗೋವಿಂದರಾಜು, ರವೀಶ್, ಎಂಜಿನಿಯರ್‌ ಎನ್.ವಿ.ರಾಮಮೂರ್ತಿ, ಕೆ.ಟಿ.ತಿಪ್ಪೇಸ್ವಾಮಿ, ಮಂಜು ಅಮಲಗೊಂದಿ, ಮಮತಾ, ಕಾವ್ಯಶ್ರಿ ಹಾಗೂ ಎಚ್‌.ಎನ್.ರಶ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.