ADVERTISEMENT

ಡಿ.ಕೆ.ರವಿ ಪತ್ನಿ ಸ್ಪರ್ಧೆಗೆ ತಾಯಿ ಗೌರಮ್ಮ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 17:55 IST
Last Updated 2 ಅಕ್ಟೋಬರ್ 2020, 17:55 IST
ಡಿ.ಕೆ.ರವಿ ಅವರ ತಾಯಿ ಗೌರಮ್ಮ
ಡಿ.ಕೆ.ರವಿ ಅವರ ತಾಯಿ ಗೌರಮ್ಮ   

ಕುಣಿಗಲ್: ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರನ್ನು ಬೆಂಗಳೂರುರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದಕಣಕ್ಕಿಳಿಸುವ ತಂದೆ ಹನುಮಂತರಾಯಪ್ಪನವರ ನಿರ್ಧಾರದ ಬಗ್ಗೆ ಡಿ.ಕೆ.ರವಿ ತಾಯಿ ಗೌರಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಲಿಯೂರುದುರ್ಗ ಹೋಬಳಿಯ ದೊಡ್ಡಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ‘ಸೊಸೆ ಕುಸುಮಾ ತಂದೆ ಹೆಸರಿನಲ್ಲಿ ರಾಜಕೀಯ ಪ್ರವೇಶ ಮಾಡಲಿ. ಡಿ.ಕೆ. ರವಿ ಪತ್ನಿಯಾಗಿ ರಾಜಕೀಯ ಮಾಡುವ ಅರ್ಹತೆ ಅವರಿಗಿಲ್ಲ. ರವಿ ಸತ್ತ ದಿನ ಬಂದು ಮಣ್ಣು ಹಾಕಿ ಹೋದವಳು,ಇಲ್ಲಿಯವರೆಗೂ ಬಂದು ನೋಡಿಲ್ಲ. ಅಂದೆ ಡಿ.ಕೆ.ರವಿಯೊಂದಿಗಿನ ಸಂಬಂಧ ಆಕೆಗೆ ಕಡಿದು ಹೋಗಿದೆ’ ಎಂದರು.

‘ಮಗನನ್ನು ಕಷ್ಟ ಪಟ್ಟು ಓದಿಸಿದ್ದೆ. ಆದರೆ ಮಗ ಮೃತಪಟ್ಟ ನಂತರ ಬಂದ ಪರಿಹಾರಧನವನ್ನೆಲ್ಲ ತೆಗೆದುಕೊಂಡು ಹೋದವರು ನಮ್ಮ ಕಷ್ಟಗಳಿಗೆ ಸ್ಪಂದಿಸಿಲ್ಲ. ಪ್ರಚಾರಕ್ಕಾಗಿ ತಮ್ಮ ಮಗನ ಹೆಸರು, ಭಾವಚಿತ್ರ ಬಳಿಸಿದ್ದೇ ಆದರೆ ಬೆಂಗಳೂರಿಗೆ ತೆರಳಿ ಕರಪತ್ರಗಳಿಗೆ ಬೆಂಕಿ ಹಚ್ಚುತ್ತೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.